ಮೈಗೆ ಬೀಳ್ತಿದೆ ಪ್ರಾಣ ಹೋಗುವಷ್ಟು ಹಿಮ ಮಧ್ಯರಾತ್ರಿಯಲ್ಲಿ ಸಹ ಗಡಿಯಲ್ಲಿ ಧೀರ ಯೋಧನ ಕರ್ತವ್ಯ..!

Date:

ಭಾರತದ ನಿಜವಾದ ಹೀರೋಗಳು ಯಾರು ಎಂದರೆ ಅದು ನಮ್ಮ ಯೋಧರು. ಯೋಧನೊಬ್ಬ ಗಡಿಯಲ್ಲಿ ನಿಂತು ತಡರಾತ್ರಿ ಬೆಳಗ್ಗೆ ಮಧ್ಯಾಹ್ನ ಎನ್ನದೆ ಗಡಿಯನ್ನು ಕಾಯುತ್ತಿದ್ದರೆ ನಾವೆಲ್ಲರೂ ನೆಮ್ಮದಿಯಾಗಿ ನಿದ್ರಿಸಲು ಸಾಧ್ಯ. ಹೌದು ಯೋಧರು ಬಾರ್ಡರ್ ನಲ್ಲಿ ನಿಂತು ನಮ್ಮ ದೇಶವನ್ನು ಕಾಯುತ್ತಿದ್ದಾರೆ ಎಂಬ ದೃಢವಾದ ನಂಬಿಕೆ ಮೇಲೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಸಹ ನೆಮ್ಮದಿಯಾಗಿ ಕಣ್ಮುಚ್ಚಿ ನಿದ್ದೆ ಮಾಡುತ್ತಿದ್ದಾನೆ. ಆದರೆ ಯೋಧರು ಮಾತ್ರ ಪಡುವ ಕಷ್ಟ ಅಷ್ಟಿಷ್ಟಲ್ಲ. ಇನ್ನು ಇತ್ತೀಚೆಗಷ್ಟೇ ಸಿಆರ್ಪಿಎಫ್ ಯೋಧನೊಬ್ಬ ಜಮ್ಮು ಕಾಶ್ಮೀರದಲ್ಲಿ ಗಡಿ ಕಾಯುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.

ಹೌದು ಗಡಿಯಲ್ಲಿ ಪ್ರಾಣಕ್ಕೆ ಹಾನಿ ತರುವಂತಹ ಮಟ್ಟದಲ್ಲಿ ಹಿಮಪಾತ ಆಗುತ್ತಿದ್ದರೂ ಸಹ ಅದನ್ನು ಲೆಕ್ಕಿಸದೆ ಕೊಂಚವೂ ಎದೆಗುಂದದೆ ಗಾಂಭೀರ್ಯದಿಂದ ಗಡಿಯನ್ನು ಸಿಆರ್ ಪಿಎಫ್ ನ ಓರ್ವ ಯೋಧ ಕಾಯುತ್ತಿದ್ದಾನೆ. ಅದು ರ ಮಧ್ಯರಾತ್ರಿಯ ವೇಳೆ ಸುತ್ತಲೂ ಕತ್ತಲು ಮೇಲೆ ಹಿಮ ಯಾವುದನ್ನು ಸಹ ಲೆಕ್ಕಿಸದೆ ಈ ಧೀರಾ ಯೋಧ ನಾಡಿನಲ್ಲಿ ಇರುವ ಜನರ ಒಳಿತಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಗಡಿಯನ್ನು ಕಾಯುತ್ತಿದ್ದಾರೆ. ಇನ್ನು ಈ ಫೋಟೋವನ್ನು ಸಿಆರ್ಪಿಎಫ್ ಅಸಿಸ್ಟೆಂಟ್ ಕಮಾಂಡರ್ ಕಶ್ಯಪ್ ಕಡಗತ್ತೂರು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಯೋಧನ ಈ ಮಹಾಕಾರ್ಯಕ್ಕೆ ಮತ್ತು ಶಿಸ್ತಿನ ಕರ್ತವ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನಾವೆಲ್ಲ ನೆಮ್ಮದಿಯಾಗಿ ಜೀವಿಸುವುದಕ್ಕೋಸ್ಕರ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಇಷ್ಟೆಲ್ಲಾ ಮಾಡುತ್ತಿರುವ ಯೋಧರಿಗೆ ನಮ್ಮದೊಂದು ದೊಡ್ಡ ಸಲಾಂ

Share post:

Subscribe

spot_imgspot_img

Popular

More like this
Related

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ ಮೈಸೂರು:...

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ...

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...