ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ನನ್ನನ್ನು ಕ್ಲಕ್೯ ರೀತಿ ನಡೆಸಿ ಕೊಂಡರು ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತ ನಡೆಸಲು ಬಾರದವರು ಇದೇ ರೀತಿ ಹೇಳುವುದು. ಹಾಗಾಗಿ ನಾವು ಏನು ಮಾಡಲು ಸಾಧ್ಯ ಎಂದರು.
ಸಮ್ಮಿಶ್ರ ಸರಕಾರದಲ್ಲಿ ನನ್ನನ್ನು ಮಿತ್ರನಂತೆ ನೋಡುವ ಬದಲು ಶತ್ರುವಿನಂತೆ ಕುಮಾರಸ್ವಾಮಿ ನಡೆದುಕೊಂಡರು. ನಮ್ಮನ್ನು ಮಿತ್ರರ ರೀತಿ ನೋಡಿದ್ದರೆ ಕುಮಾರಸ್ವಾಮಿಯವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಮ್ಮ ಸಲಹೆ ಸೂಚನೆಗಳನ್ನು ಪಾಲಿಸಿದ್ದರೆ ಮೈತ್ರಿ ಸರಕಾರ ಉಳಿಯುತಿತ್ತು ಎಂದು ಹೇಳಿದರು.