ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಹೈಕಮಾಂಡ್ ನಿರ್ಧಾರದಂತೆ ನಾವು 80 ಶಾಸಕರಿದ್ದರೂ ಸಹ 37 ಶಾಸಕರಿರುವ ಜೆಡಿಎಸ್ ಗೆ ಬೆಂಬಲ ಕೊಡೋಣ ಎಂದು ಹೇಳಿದಾಗ ಮರು ಮಾತನಾಡದೇ ಒಪ್ಪಿಕೊಂಡಿದ್ದೆವು ಆದರೆ ಅದರ ಎಲ್ಲ ಶಾಸಕರು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದರು. ಇದಕ್ಕೆಲ್ಲ ಕಾರಣ ಜೆಡಿಎಸ್ ನ ದೇವೇಗೌಡರು ಕುಮಾರಸ್ವಾಮಿ ಹಾಗೂ ರೇವಣ್ಣ ಎಂದು ನೇರ ಆರೋಪ ಮಾಡಿದ್ದಾರೆ .
ನಾನು ಯಾವತ್ತೂ ರಾಜಕೀಯವನ್ನು ದುರುಪಯೋಗಪಡಿಸಿಕೊಂಡಿಲ್ಲ ದೇವೇಗೌಡರು ಅವರ ಪಕ್ಷ ಹಾಗೂ ಸರಕಾರವನ್ನು ಉಳಿಸಿಕೊಳ್ಳುವಲ್ಲಿ ನಿಪುಣರು ನಾವು ಐದಾರು ಸಮನ್ವಯ ಸಮಿತಿ ಸಭೆಗಳನ್ನು ಮಾಡಿದ್ದೇವು. ಆದರೆ ಅದರಲ್ಲಿ ಕೈಗೊಂಡ ನಿರ್ಧಾರಗಳನ್ನು ಕುಮಾರಸ್ವಾಮಿ ಜಾರಿಗೊಳಿಸಿಲ್ಲ. ಸಮನ್ವಯ ಸಮಿತಿ ನಿರ್ಧಾರ ಜಾರಿಗೊಳಿಸದೇ ಇದ್ದದ್ದು ಅವರ ತಪ್ಪು . ಇದೆಲ್ಲದರಿಂದ ಮೈತ್ರಿ ಸರ್ಕಾರ ಪತನಗೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ .