ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕಾದಲ್ಲಿದ್ದಾರೆ..ಇತ್ತ ಅವರ ಸರ್ಕಾರದ ಬುಡ ಅಲುಗಾಡುತ್ತಿದೆ..! 13 ತಿಂಗಳ ಕುಮಾರಸ್ವಾಮಿ ಸರ್ಕಾರ ಪತನದ ಅಂಚಿಗೆ ಬಂದು ತಲುಪಿದೆ. ಮೈತ್ರಿ ಸರ್ಕಾರ ಬೀಳುತ್ತೆ ಅನ್ನೋ ಚರ್ಚೆ ಅನೇಕ ದಿನಗಳಿಂದ ಕೇಳಿಬಂದಿತ್ತು. ಆದರೆ, ನಿನ್ನೆ ಕೂಡ ಯಾರೂ ಇಂದೇ ಇಂಥಾ ಬೆಳವಣಿಗೆ ಆಗುತ್ತದೆ ಎಂದು ಊಹಿಸಿರಲಿಲ್ಲ..! ಬೆಳ್ಳಬೆಳ್ಗೆ ಅತೃಪ್ತರು ರಾಜೀನಾಮೆ ಶಾಕ್ ಮೇಲೆ ಶಾಕ್ ನೀಡಿದರು..!
ಭಾರಿ ಅಚ್ಚರಿಗೆ ಕಾರಣವಾಗಿದ್ದು ಹಿರಿಯ ನಾಯಕ ರಾಮಲಿಂಗ ರೆಡ್ಡಿ ಹಾಗೂ ನಿಕಟಪೂರ್ವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರ ರಾಜೀನಾಮೆ…!
ಹೌದು, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಕೊನೆಯ ದಿನಗಳು ಹತ್ತಿರವಾದಂತಿದೆ. ಇಂದು 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರು. ಮೊದಲು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ವಿಧಾನಸೌಧಕ್ಕೆ ಬಂದ ಜೆಡಿಎಸ್ನ ನಿಕಟಪೂರ್ವ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಸೇರಿದಂತೆ ಶಿವರಾಮ್ ಹೆಬ್ಬಾರ್, ಬಿಸಿ ಪಾಟೀಲ್, ನಾರಾಯಣ ಗೌಡ, ಮಹೇಶ್ ಕಮಟಳ್ಳಿ ಹಾಗೂ ಗೋಪಾಲಯ್ಯ ರಾಜೀನಾಮೆ ನೀಡಿದ್ರು.ಇದಾದ ಬಳಿಕ ರಾಮಲಿಂಗ ರೆಡ್ಡಿ, ಭೈರತಿ ಬಸವರಾಜ್, ಎಸ್ ಟಿ ಸೋಮಶೇಖರ್ ಹಾಗೂ ಮುನಿರತ್ನ ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ರು. ಒಟ್ಟಾರೆ ಮೈತ್ರಿಯ 14 ವಿಕೆಟ್ಗಳು ಉರುಳಿವೆ.. ಹೀಗೆ ಕೊನೆಯ ದಿನಗಳು ಮೈತ್ರಿಗೆ ಸನಿಹ ಆಗುತ್ತಿವೆ…
ಮೈತ್ರಿ ಸರ್ಕಾರ ಪತನ ಬಹುತೇಕ ಖಚಿತ..!?
Date: