ಮೈದಾನದಲ್ಲೆ ಪ್ರಾಣ ಬಿಟ್ಟ ಮುಂಬೈ ಕ್ರಿಕೆಟಿಗ..!!
ವೈಭವ್ ಕೇಸರ್ಕರ್ (24) ಎಂಬ ಯುವ ಕ್ರಿಕೆಟಿಗ ಇಂದು ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲಿಯೇ ಹೃದಯಾಘಾತದಿಂದ ಮೈದಾನದಲ್ಲೇ ಸಾವನಪ್ಪಿರುವ ಘಟನೆ ಮುಂಬೈನಲ್ಲಿ ವರದಿಯಾಗಿದೆ…
24 ವರ್ಷದ ವೈಭವ್ ಗೆ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದೆ.. ಆದರೆ ಇದನ್ನ ಲೆಕ್ಕಿಸದೆ ವೈಭವ್ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ.. ಆನಂತರ ಫಿಲ್ಡಿಂಗ್ ಮಾಡಲು ಮುಂದಾದ ಈ ಯುವ ಕ್ರಿಕೆಟಿಗನಿಗೆ ಹೃದಯಾಘಾತ ಸಂಭವಿಸಿ ಫಿಲ್ಡ್ ನಲ್ಲಿ ಕುಸಿದು ಬಿದ್ದಿದ್ದಾರೆ.. ಟೆನಿಸ್ ಬಾಲ್ ಟೂರ್ನಮೆಂಟ್ ನಲ್ಲಿ ಭಾಗವಿಸಿದ್ದ ಈತ ಮುಂದಿನ ದಿನಗಳನ್ನ ಟೀಮ್ ಇಂಡಿಯಾಗೆ ಸೇರುವ ಕನಸು ಕಂಡಿದ್ದರು ಎನ್ನಲಾಗಿದೆ.. ತಕ್ಷಣವೇ ಈತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ.. ಅಷ್ಟರಲ್ಲಾಗಲೇ ವೈಭವ್ ಅಸುನೀಗಿದ್ದಾರೆ






