ಮೈದಾನದಲ್ಲೇ ದುರ್ವರ್ತನೆ ತೋರಿದ ಶಕೀಬ್ ಅಲ್ ಹಸನ್

Date:

ಧಾಕಾ ಪ್ರೀಮಿಯರ್ ಡಿವಿಶನ್ ಟ್ವೆಂಟಿ ಟ್ವೆಂಟಿ ಕ್ರಿಕೆಟ್‌ ಲೀಗ್‌ನಲ್ಲಿ ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್, ದುರ್ವರ್ತನೆಗಾಗಿ ಗಮನ ಸೆಳೆದಿದ್ದಾರೆ. ಮೈದಾನದಲ್ಲಿ ಶಕೀಬ್ ಆನ್ ಫೀಲ್ಡ್ ಅಂಪೈರ್‌ ತೀರ್ಪಿಗೆ ಸಿಟ್ಟಿಗೆದ್ದು ಎಲ್ಲೆ ಮೀರಿ ವರ್ತಿಸಿದ್ದಾರೆ.

https://twitter.com/Shah_151/status/1403325742335750149?s=19

ಶಕೀಬ್ ಅಲ್ ಹಸನ್ ಅವರ ಮಿತಿ ಮೀರಿದ ವರ್ತನೆ ಕಾಣಸಿಕ್ಕಿದ್ದು ಜೂನ್ 11ರ ಶ ಮಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಅಬಹನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ. ಮಹಮ್ಮದನ್ ತಂಡದಲ್ಲಿದ್ದ ಶಕೀಬ್‌ ತನ್ನ ಬಾಂಗ್ಲಾದೇಶ ತಂಡದ ಸಹ ಆಟಗಾರ ಮುಸ್ತಫಿಝುರ್ ರಹೀಮ್ ವಿಕೆಟ್‌ಗಾಗಿ ಎಲ್‌ಬಿಡಬ್ಲ್ಯೂ ಅಪೀಲ್ ಮಾಡಿದರು. ಆಗ ಅಂಪೈರ್ ಔಟ್ ನೀಡಲಿಲ್ಲ.

ಅಂಪೈರ್ ತೀರ್ಪು ತನ್ನ ಪರವಾಗಿ ಬಾರದಿದ್ದರಿಂದ ಹತಾಶೆಗೊಂಡ ಶಕೀಬ್ ಸ್ಟಂಪ್ಟ್‌ಗೆ ಒದ್ದು ತನ್ನ ಸಿಟ್ಟನ್ನು ತೋರಿಕೊಂಡಿದ್ದಾರೆ. ಶಕೀಬ್ ವರ್ತನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ಪಂದ್ಯದಲ್ಲಿ ಶಕೀಬ್ ಇನ್ನೊಂದು ಸಾರಿ ಇದೇ ರೀತಿ ಎಲ್ಲೇ ಮೀರಿದ್ದು ಕಾಣಿಸಿದೆ.

ಮತ್ತೊಂದು ಸಾರಿ ಇಂಥದ್ದೇ ರೀತಿಯ ಅಪೀಲ್‌ಗೆ ಶಕೀಬ್ ತನ್ನ ನಿಯಂತ್ರಣ ಮೀರಿ ಕೋಪ ತೋರಿಕೊಂಡಿದ್ದಾರೆ. ಅಂಪೈರ್ ಮುಂದೆಯೇ ಶಕೀಬ್ ಸ್ಟಂಪ್ಸ್ ಕಿತ್ತು ಎಸೆದಿರುವ ವಿಡಿಯೋ ಕೂಡ ಸೆರೆಯಾಗಿದೆ. ಈ ಪಂದ್ಯದಲ್ಲಿ ಮೊಹಮ್ಮದನ್ ತಂಡ 31 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ.

 

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...