ಮೈಸೂರು: ಸಿಎಂ ಸಿದ್ದರಾಮಯ್ಯ ಇಂದಿನಿಂದ 4 ದಿನಗಳ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಹೌದು ಕಡೆಗಳಿಗೆಯಲ್ಲಿ ತಂತ್ರ ಮಾಡಿದರೆ ಲಾಭ ಇಲ್ಲ. ಅದಕ್ಕೆ ಈಗಲೇ ಯುದ್ಧ ತಂತ್ರ ರೂಪಿಸಬೇಕು ಬರುತ್ತೇನೆ ಎಂದು ಆಪ್ತರಿಗೆ ಸಂದೇಶ ಕಳುಹಿಸಿದ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಮೈಸೂರು ಮಹಾರಾಜ ಯದುವೀರ್ ವಿರುದ್ಧ ರಣತಂತ್ರ ಹೂಡುವುದರ ಜೊತೆ ಚಾಮರಾಜನಗರ ಭಿನ್ನಾಭಿಪ್ರಾಯ ಸರಿಪಡಿಸುವ ಹೊಣೆಯೂ ಸಿಎಂ ಹೆಗಲಿಗಿದೆ.
ಜಾತಿ ಸಮೀಕರಣದಲ್ಲಿ ನಾಯಕರನ್ನು ಕರೆದು ಮಾತನಾಡುವುದು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡುವುದು, ಗೊಂದಲ ಅಸಮಧಾನವಿದ್ದರೆ ಆ ನಾಯಕರನ್ನು ಕರೆದು ಮಾತನಾಡುವುದು. ಹೀಗೆ ಮೈಸೂರು ಲೋಕಸಭೆ ಹಾಗೂ ಚಾಮರಾಜನಗರ ಲೋಕಸಭೆ ಎರಡೂ ಕ್ಷೇತ್ರದ ಚುನಾವಣಾ ರಣತಂತ್ರ ಹೆಣೆಯಲು ಸ್ವತ: ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.
ಮೈಸೂರಿಗೆ ಸಿಎಂ ಎಂಟ್ರಿ: ಮುಖಂಡರ ಜೊತೆ ಹೈವೊಲ್ಟೇಜ್ ಮೀಟಿಂಗ್
Date: