No menu items!
12.1 C
Munich
Wednesday, May 20, 2026

ಇಂದಿನ ಟೆಕ್ನಾಲಜಿಯಿಂದ ನನ್ನ ಜೀವ ಉಳಿಯಿತು !

Must read

ಬೆಂಗಳೂರು: ಇಂದಿನ ಟೆಕ್ನಾಲಜಿಯಿಂದ ನನ್ನ ಜೀವ ಉಳಿಯಿತು. ಇಲ್ಲದಿದ್ದರೆ ಕಷ್ಟ ಆಗಿರುವುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಚೆನ್ನೈನಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಪಡೆದು ಬೆಂಗಳೂರಿಗೆ ಆಗಮಿಸಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಎರಡು ಬಾರಿ ನನಗೆ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ಅದರಲ್ಲಿ ಲೋಪದೋಷಗಳಾಗಿದ್ದವು. ಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ. ಇಂದಿನ ಟೆಕ್ನಾಲಜಿಯಿಂದ ನನ್ನ ಜೀವ ಉಳಿಯಿತು. ಇಲ್ಲದಿದ್ದರೆ ಕಷ್ಟ ಆಗಿರುವುದು.
ನನಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಸಹ ಸಾಯಿಬಾಬಾ ಭಕ್ತರು. ಅವರೂ ಕೂಡ ನನಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಸಾಯಿ ಬಾಬಾ ಬಂದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಆ ವೈದ್ಯರು ಹೇಳಿದ್ದಾಗಿ ಹೆಚ್ಡಿಕೆ ತಿಳಿಸಿದರು. ಮುಂದಿನ ಮೂರ್ನಾಲ್ಕು ದಿನ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತೇನೆ. ನಂತರ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ. 25 ದಿನಗಳ ಕಾಲ ನನ್ನ ಕೈಲಾದಷ್ಟು ಪ್ರಚಾರ ಮಾಡಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡ್ತೀನಿ ಎಂದರು.

- Advertisement -spot_img

More articles

- Advertisement -spot_img

Latest article