ಮೈಸೂರಿನಲ್ಲಿ ಏಕಾಏಕಿ ಏರಿಕೆ ಕಂಡ ಕೊವಿಡ್!

0
70

ಜಿಲ್ಲೆಯಲ್ಲಿ ಶುಕ್ರವಾರ ದಿಢೀರನೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು, ಒಂದೇ ದಿನ 219 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.ಮೈಸೂರು ಜಿಲ್ಲೆಯಲ್ಲಿ ಗುರುವಾರ ಇದ್ದ 65 ಸೋಂಕಿನ ಪ್ರಕರಣ ನಿನ್ನೆ ಒಂದೆ ದಿನ ಮೂರು ಪಟ್ಟು ಏರಿಕೆಯಾಗಿ, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.

ಮೈಸೂರು ಜಿಲ್ಲೆಯಲ್ಲಿ ಪ್ರಸ್ತುತ 484 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ ಜಿಲ್ಲೆಯಲ್ಲಿ 9 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ 1,80,729 ಮಂದಿಗೆ ಸೋಂಕು ಪತ್ತೆಯಾಗಿದ್ದು, 1,77,817 ಮಂದಿ ಗುಣಮುಖರಾಗಿದ್ದಾರೆ.

ಮೈಸೂರು ನಗರದಲ್ಲಿ 163 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಕೆ.ಆರ್.ನಗರ 11, ಮೈಸೂರು ತಾಲೂಕು 5, ನಂಜನಗೂಡು 9, ಪಿರಿಯಾಪಟ್ಟಣ 2, ತಿ.ನರಸೀಪುರ 29, ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ 219 ಪ್ರಕರಣ ದಾಖಲಾಗಿದೆ. ಸರಗೂರು, ಸಾಲಿಗ್ರಾಮ, ಹೆಚ್.ಡಿ.ಕೋಟೆ, ಹುಣಸೂರು ತಾಲೂಕಿನಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

 

ಮೈಸೂರು ಜಿಲ್ಲೆಯ 5 ವರ್ಷದೊಳಗಿನ ಮಕ್ಕಳಲ್ಲಿ 3 ಪ್ರಕರಣ, 10 ವರ್ಷದೊಳಗಿನ ಮಕ್ಕಳಲ್ಲಿ 5 ಪ್ರಕರಣ, 17 ವರ್ಷದೊಳಗಿನ ಮಕ್ಕಳಲ್ಲಿ 15 ಪ್ರಕರಣ ಕಾಣಿಸಿಕೊಂಡಿದೆ.ಒಟ್ಟು ಜಿಲ್ಲೆಯಲ್ಲಿ 1 ವರ್ಷದಿಂದ 17 ವರ್ಷದೊಳಗಿನ 23 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here