ಮೈಸೂರಿನಲ್ಲಿ ಪುನೀತ್ ಯುವರತ್ನ ಚಿತ್ರೀಕರಣದ ವೇಳೆ ದರ್ಶನ್ ಫ್ಯಾನ್ಸ್ ಗೆ ಬಿತ್ತಾ ಏಟು?! ನಡೆದಿದ್ದೇನು ಈ ಸುದ್ದಿ ಓದಿ.

admin
1 Min Read

ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪುನೀತ್ ರಾಜ್ಕುಮಾರ್ ಅಭಿನಯದ ಯುವ ರತ್ನ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಈ ಚಿತ್ರದ ಚಿತ್ರೀಕರಣವನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದ್ದು ಅಲ್ಲಿನ ಯುವರಾಜ ಕಾಲೇಜಿನಲ್ಲಿ ನಿನ್ನೆ ಚಿತ್ರೀಕರಣ ನಡೆಯುತ್ತಿತ್ತು. ಇನ್ನು ಇದೇ ವೇಳೆ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಜೈಕಾರ ಕೂಗುತ್ತಾ ಕಾಯುತ್ತಿದ್ದರು. ಈ ಸಮಯದಲ್ಲಿ ಕೆಲ ದರ್ಶನ್ ಅಭಿಮಾನಿಗಳು “ಜೈ ಡಿ ಬಾಸ್” ಎಂದು ಘೋಷಣೆಯನ್ನು ಗುಂಪಿನ ಮಧ್ಯೆ ಕೂಗಿದ್ದಾರೆ.


ಈ ವಿಷಯಕ್ಕಾಗಿಯೇ ದರ್ಶನ್ ಅಭಿಮಾನಿಗಳ ಗುಂಪು ಮತ್ತು ಪುನೀತ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಹಾಗೂ ಆ ಗುಂಪಿನ ಯುವಕರು ಮಾಡುತ್ತಿರುವ ಆರೋಪದ ಪ್ರಕಾರ ಪುನೀತ್ ರಾಜ್ಕುಮಾರ್ ಅವರ ಬೌನ್ಸರ್ ಗಳು ಅವರ ಮೇಲೆ ಕೈ ಮಾಡಿದ್ದಾರಂತೆ. ಹೌದು ಇದೀಗ ಈ ವಿಷಯ ದೊಡ್ಡ ಮಟ್ಟಕ್ಕೆ ತಿರುಗಿದ್ದು ವಿದ್ಯಾರ್ಥಿಗಳ ಗುಂಪು ನ್ಯಾಯ ಬೇಕು ಎಂದು ಧರಣಿಯನ್ನು ಸಹ ನಡೆಸಿದೆ. ಇನ್ನು ಕೆಲ ಜನ ಈ ರೀತಿ ಮಾಡಿದ್ದು ತಪ್ಪು ಎಂದು ಹೇಳಿದರೆ, ಮತ್ತಷ್ಟು ಜನ ಇನ್ನೊಬ್ಬ ಸ್ಟಾರ್ ನಟನ ಚಿತ್ರ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ಮತ್ತೊಬ್ಬ ಸ್ಟಾರ್ ನಟನಿಗೆ ಜೈಕಾರ ಹಾಕಿದ್ದು ತಪ್ಪು ಇದರಿಂದಲೇ ಇಷ್ಟೆಲ್ಲ ಆಗಿದ್ದು ಎಂದು ಅಭಿಪ್ರಾಯ ತಿಳಿಸುತ್ತಿದ್ದಾರೆ.

Share This Article
Leave a Comment