ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿ ತದನಂತರ ಬಂಧಿಸಿರುವ ಕಾರಣ ರಾಮನಗರ ಜಿಲ್ಲೆಯಾದ್ಯಂತ ಆಕ್ರೋಶ ಮುಗಿಲು ಮುಟ್ಟಿದೆ. ಡಿಕೆಶಿ ರಾಮನಗರ ಜಿಲ್ಲೆಯ ಕನಕಪುರದವರು ಆದ ಕಾರಣ ರಾಮನಗರ ಜಿಲ್ಲೆಯ ಅತ್ಯಂತ ಅವರ ಅಭಿಮಾನಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಮನಗರ ಚನ್ನಪಟ್ಟಣ ಕನಕಪುರ ಪಟ್ಟಣಗಳಲ್ಲಿ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅಂಗಡಿ ಮುಂಗಟ್ಟುಗಳೆಲ್ಲ ಮುಚ್ಚಿ ಬಂದ್ ಗೆ ಬೆಂಬಲವನ್ನು ವ್ಯಾಪಾರಿಗಳು ಸಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಎಸ್ಆರ್ಟಿಸಿ ಮತ್ತು ನಗರ ಸಾರಿಗೆ ಬಸ್ಗಳಿಗೆ ಈಗಾಗಲೇ ಬೆಂಕಿಯನ್ನು ಹಚ್ಚಲಾಗಿದ್ದು ಈ ಮಾರ್ಗಗಳಲ್ಲಿ ಬಸ್ ಓಡಾಟ ರದ್ದಾಗಿದೆ. ಬೆಂಗಳೂರು – ಮೈಸೂರು & ಬೆಂಗಳೂರು – ಕೊಳ್ಳೇಗಾಲ ಮಾರ್ಗಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಇನ್ನು ಇಂದು ಮತ್ತು ನಾಳೆ ಎರಡು ದಿನವೂ ಸಹ ಈ ಮಾರ್ಗಗಳಲ್ಲಿ ಬಸ್ ಸಂಚಾರ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.