ಪ್ರತಿದಿನ ಮೊಟ್ಟೆ ಸೇವನೆಯಿಂದ ಸಕ್ಕರೆ ಕಾಯಿಲೆಯನ್ನು ದೂರ ಇಡಬಹುದೆಂದು ಎಂದು ಹೊಸ ಅಧ್ಯಯನವೊಂದು ಹೇಳಿದೆ
ಹೌದು ನಿರ್ದಿಷ್ಠ ಲಿಪಿಡ್ ಅಣುಗಳನ್ನೊಳಗೊಂಡ ಹೆಚ್ಚಿನ ಮೊಟ್ಟೆ ಸೇವಿಸುತ್ತಿದ್ದ ಪುರುಷರ ರಕ್ತದ ಮಾದರಿಗಳನ್ನು ಟೈಪ್-2 ಡಯಾಬಿಟಿಸ್ ನಿಂದ ಮುಕ್ತವಾಗಿರುವಂತಹ ಪುರುಷರ ರಕ್ತದ ಮಾದರಿಯೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಸಕಾರಾತ್ಮಕ ಅಂಶ ಕಂಡುಬಂದಿಯಂತೆ.
ಈ ಸಂಬಂಧ ಪ್ರತಿದಿನ ಒಂದು ಮೊಟ್ಟೆ ಸೇವಿಸುವ ಹಾಗೂ ವಾರಕ್ಕೆ ಎರಡು ಮೊಟ್ಟೆ ಸೇವಿಸುವ ಹಾಗೂ ಟೈಪ್-2 ಡಯಾಬಿಟಿಸ್ ಇದ್ದು ಮೊಟ್ಟೆ ತೆಗೆದುಕೊಳ್ಳುವರು ಹಾಗೂ ಆರೋಗ್ಯಕರವಾಗಿ ಉಳಿದಿರುವ ನಾಲ್ಕು ಗುಂಪುಗಳ 239 ರಕ್ತದ ಮಾದರಿಗಳನ್ನು ಅಧ್ಯಯನ ನಡೆಸಲಾಗಿದೆ ಎಂದು ಮಾಲಿಕ್ಯೂಲರ್ ನ್ಯೂಟ್ರಿಷಿಯನ್ ಅಂಡ್ ಪುಡ್ ರಿಸರ್ಚ್ ನಲ್ಲಿ ಪ್ರಕಟಿಸಲಾಗಿದೆ.
ಮೊಟ್ಟೆ ಸೇವನೆಯಿಂದ ಮಧುಮೇಹದಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಅಧ್ಯಯನದಿಂದ ಸಲಹೆ ನೀಡಲಾಗಿದೆ.