ಭೂಮಿಗೀಗ 4.6 ಬಿಲಿಯನ್ ವಯಸ್ಸಾಗಿದೆ. ಇದು ಅಸ್ತಿತ್ವಕ್ಕೆ ಬಂದ 1,000 ಮಿಲಿಯನ್ ವರ್ಷಗಳವರೆಗೆ ಅಂದ್ರೆ 1 ಬಿಲಿಯನ್ ವರ್ಷ ಆಗುವವರೆಗೆ ಯಾವುದೇ ರೀತಿಯ ಜೀವರಾಶಿಗಳಿರಲಿಲ್ಲ. ಸಮುದ್ರಕ್ಕೆ ಸಿಡಿಲು ಬಡಿದಾಗ ಜೀವದ ಉಗಮವಾಯಿತು ಎಂದು ನಂಬಿದ್ದೇವೆ.
ಸಿಡಿಲು-ಮಿಂಚುಗಳು ನೀರಿನಲ್ಲಿ ಹರಿಬಿಟ್ಟ ಶಕ್ತಿಯ ಪರಿಣಾಮ ಸಮುದ್ರದಲ್ಲಿದ್ದ ರಾಸಾಯನಿಕಗಳು ಮಿಶ್ರಣಗೊಂಡು, ಅಮಿನೋ ಆಸಿಡ್ ನಂತಹ ಪದಾರ್ಥಗಳು ತಯಾರಾದವು. ಇವುಗಳು ಜೀವದ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿದವು ಎಂದು ತಿಳಿದಿದ್ದೇವೆ.
ನಿಮಗೆ ಮೊದಲು ಜನಿಸಿದ ಜೀವಿಗಳ ಬಗ್ಗೆ ಏನಾದರು ಗೊತ್ತಿದೆಯೇ? ಭೂಮಿಯ ಮೇಲೆ ಹುಟ್ಟಿದ ಮೊದಲ ಜೀವಿಗಳು ಎಷ್ಟು ಚಿಕ್ಕದಾಗಿದ್ದವು ಗೊತ್ತಾ? ಮೊದಲು ಹುಟ್ಟಿದ ಸಾವಿರಾರು ಜೀವಿಗಳನ್ನು ಒಟ್ಟಿಗೆ ಒಮ್ಮೆಲೇ ಗುಂಡು ಸೂಜಿಯ ತುದಿಯಲ್ಲಿ ಕೂರಿಸಬಹುದಿತ್ತು…! ಅವು ಅಷ್ಟರಮಟ್ಟಿಗೆ ಚಿಕ್ಕದಾಗಿದ್ದವು.