No menu items!
12.3 C
Munich
Thursday, April 30, 2026

ಹುಟ್ಟುಹಬ್ಬದಂದು ಕನ್ನಡಾಭಿಮಾನ‌ ಮೆರೆದ ಡಿ.ಬಾಸ್..! ಇಂಗ್ಲಿಷ್ ನಲ್ಲಿ ಮಾತಾಡಿ ಅಂದಿದ್ದಕ್ಕೆ ಖಡಕ್ ಉತ್ತರ ಕೊಟ್ಟ ದರ್ಶನ್..!

Must read

ಚಂದನವನದ ಸ್ಟಾರ್ ನಟ, ಅಭಿಮಾನಿಗಳ ಪ್ರೀತಿಯ ‘ದಾಸ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ಆರ್‌.ಆರ್‌ ನಗರ ನಿವಾಸದ ಮುಂದೆ ನಾನಾ ಕಡೆಗಳಿಂದ ಆಗಮಿಸಿದ ಅಭಿಮಾನಿಗಳ ಜೊತೆಗೆ ದರ್ಶನ್‌ 43 ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 

ಮಾಧ್ಯಮದವರೊಂದಿಗೆ ಬರ್ತ್ ಡೇ ಸಂತೋಷ ಹಂಚಿಕೊಂಡರು. ಪ್ರತೀ ವರ್ಷ ಬರುವಂತೆ ತುಂಬಾ ಜನ ಅಭಿಮಾನಿಗಳು ಬರ್ತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕೇಕ್ ತಂದಿಲ್ಲ. ಮೊಲ, ಬಾತುಕೋಳಿ ಗಿಫ್ಟ್ ಕೊಟ್ಟಿದ್ದಾರೆ. ಸಾಕಷ್ಟು ದವಸ ಧಾನ್ಯಗಳನ್ನು ತಂದಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಗ್ಲಿಷ್ ಮಾಧ್ಯಮದವರು ಇಂಗ್ಲಿಷ್ ನಲ್ಲಿ ಮಾತಾಡುವಂತೆ ಹೇಳಿದಾಗ ‘ ನನಗೆ ಇಂಗ್ಲಿಷ್ ಬರುವುದಿಲ್ಲ.‌ ಕಾರ್ಪೋರೇಶನ್ ಸ್ಕೂಲಲ್ಲಿ ಓದಿದವನಿಗೆ ಇಂಗ್ಲಿಷ್ ಎಲ್ಲಿ ಬರುತ್ತೆ? ಎಂದು ಪ್ರಶ್ನಿಸಿದರು. ಈ ಮೂಲಕ‌ ಕನ್ನಡ ಭಾಷಾಭಿಮಾನ ಮೆರೆದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article