ಬೆಂಗಳೂರು: ಮೋದಿಯಂತಹ ದುರ್ಬಲ ಪ್ರಧಾನಿಯನ್ನ ಹಿಂದೆ ಕಂಡಿಲ್ಲ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದಡಿಯಲ್ಲಿ ಅಯವ್ಯಯ ಮಂಡನೆ ಮಾಡುತ್ತೇವೆ. 2014ರಲ್ಲಿ ಕೊಟ್ಟ ಆಶ್ವಾಸನೆ ಹಾಗೂ 2024ರಲ್ಲಿ ಮೋದಿ ಕೊಟ್ಟ ಆಶ್ವಾಸನೆ ನೋಡಬೇಕು.
350 ರೂಪಾಯಿ ಸಿಲಿಂಡರ್ ಇದ್ದಾಗ ಅವರು ಬೆಲೆ ಏರಿಕೆ ಎಂದಿದ್ದರು. ಮಿಸ್ಟರ್ ಮೋದಿ ಈಗ ಸಿಲಿಂಡರ್ ಬೆಲೆ ಎಷ್ಟಿದೆ? ಈಗ ಬೆಲೆ ಏರಿಕೆ ಆಗಿಲ್ವ? ಕಚ್ಚಾ ತೈಲದ ಬೆಲೆ ಕುಸಿದರೂ ಪೆಟ್ರೋಲ್ ಡೀಸೆಲ್ ರೇಟ್ ಕಡಿಮೆ ಮಾಡಿಲ್ಲ. ಮೋದಿಯಂತಹ ದುರ್ಬಲ ಪ್ರಧಾನಿಯನ್ನ ಹಿಂದೆ ಕಂಡಿಲ್ಲ ಎಂದು ಹರಿಹಾಯ್ದರು.
ಇನ್ನೂ ರಫೆಲ್ ಹಗರಣದ ಮೂಲಕ ಕೊಳ್ಳೆ ಹೊಡದಿದ್ದಾರೆ. 5ಜಿ ಹಗರಣ ಇವತ್ತು ನಡೆದಿದೆ. ಇದು ಸಾಮಾನ್ಯ ಅಲ್ಲ. 5ಜಿ ಎಸ್ಟಿಮೇಟ್ ರೆವೆನ್ಯೂ 70 ಸಾವಿರ ಕೋಟಿ ರೂ.ಆದರೆ 12ಸಾವಿರ ಕೋಟಿ ರೂ. ಮಾತ್ರ ಆದಾಯ ಬಂದಿದೆ ಎನ್ನೋದು ಗೊತ್ತಾಗಿದೆ. ಉಳಿದ ಹಣ ಎಲ್ಲಿ ಹೋಯಿತು? ಸುಮಾರು 50ಸಾವಿರ ಕೋಟಿ ಇವರ ಅಡ್ಜಸ್ಟ್ ಮೆಂಟ್ ಮೂಲಕ ಲಾಸ್ ಆಗಿದೆ ಎಂದು ಆರೋಪಿಸಿದರು.