ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತೆ ಸುಳ್ ಹೇಳಲ್ಲ. ದೇಶದ 20% ಬಡವರ ಖಾತೆಗೆ ಕನಿಷ್ಠ ಆದಾಯ ಖಾತರಿ ಯೋಜನೆಯಡಿ ಹಣ ಹಾಕೇ ಹಾಕ್ತೀವಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಹೇಳಿದ್ದಾರೆ.
ಹರಿಯಾಣದ ಯುವನಗರ ಜಿಲ್ಲೆಯ ಜಗಧಾರಿಯಲ್ಲಿ ಕಾಂಗ್ರೆಸ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, 2014 ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಹಾಕ್ತೀನಿ ಎಂದಿದ್ದರು. ಅದನ್ನು ನಾನು 2-3 ಬಾರಿ ಕೇಳಿದ್ದೆ. ಇದರಿಂದ ಬಡವರಿ ಒಳ್ಳೆಯದಾಗುತ್ತೆ ಎಂದು ನನಗೂ ಖುಷಿಯಾಗಿತ್ತು. ಆದರೆ , ಮೋದಿ ಜನರಿಗೆ ಸುಳ್ ಹೇಳಿದ್ದಾರೆ.
ನಾವು ಸುಳ್ ಹೇಳಲ್ಲ ನುಡಿದಂತೆ ನಡೆಯುತ್ತೇವೆ.
ತಿಂಗಳಿಗೆ 12ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳನ್ನು ಗುರುತಿಸಿ ವರ್ಷಕ್ಕೆ 72 ಸಾವಿರ ರೂ ಜಮೆ ಮಾಡಲಾಗುವುದು ಎಂದರು.