No menu items!
19.6 C
Munich
Friday, May 1, 2026

ದರ್ಶನ್-ಯಶ್ ಪ್ರಚಾರಕ್ಕೆ ಸುಮಲತಾ ಮಾಸ್ಟರ್ ಪ್ಲಾನ್!

Must read

ಸುಮಲತಾ ಅಂಬರೀಶ್ ಗೆ ಸಂಪೂರ್ಣ ಬೆಂಬಲ ನೀಡಿರುವ ದರ್ಶನ್ ಮತ್ತು ಯಶ್ ಎಲ್ಲಿ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ.

ಎಲ್ಲವೂ ಪಕ್ಕಾ ಪ್ಲಾನ್ ಮಾಡಿ ಅಖಾಡಕ್ಕೆ ಧುಮುಕುತ್ತಿರುವ ಜೋಡೆತ್ತುಗಳು ಮಂಡ್ಯದಲ್ಲಿ ಹೇಗೆ ಪ್ರಚಾರ ಮಾಡ್ಬೇಕು ಎಂಬುದರ ಬಗ್ಗೆ ಪೂರ್ವ ಸಿದ್ಧತೆ ನಡೆಸಿದೆ. ಈಗಾಗಲೇ ಸುಮಲತಾ ಅವರು ಹೇಳಿರುವಂತೆ ಏಪ್ರಿಲ್ 2ನೇ ರಿಂದ ಜೋಡೆತ್ತುಗಳು ಪ್ರಚಾರ ಆರಂಭಿಸಲಿವೆ.

ಸುಮಲತಾ ಪರ ಸ್ಟಾರ್ ಕ್ಯಾಂಪೈನರ್ ಆಗಿರುವ ಡಿ ಬಾಸ್, ಯಶ್, ಅಭಿಷೇಕ್ ಮೂವರಿಂದಲೂ ಪ್ರಚಾರ ನಡೆಯಲಿದ್ದು, ವೇಳಾಪಟ್ಟಿ ಸಜ್ಜಾಗಿದೆಯಂತೆ

ಸದ್ಯದ ಮಾಹಿತಿಯ ಪ್ರಕಾರ ದರ್ಶನ್ ಮತ್ತು ಯಶ್ ಏಪ್ರಿಲ್ 2 ರಿಂದ ಪ್ರಚಾರ ಆರಂಭಿಸುತ್ತಿದ್ದು 16ನೇ ತಾರೀಖಿನವರೆಗೂ ಸುಮಲತಾ ಪರ ಮತಯಾಚನೆ ಮಾಡಲಿದ್ದಾರಂತೆ. 16ರಂದು ಬೃಹತ್ ಜಾಥ ಹಮ್ಮಿಕೊಳ್ಳಲಾಗಿದ್ದು, ಅಂದು ಬಹಿರಂಗ ಸಭೆ ನಡೆಸುವ ಯೋಜನೆ ಹಾಕಲಾಗಿದೆಯಂತೆ.

ಪ್ರಚಾರದ ವೇಳಾಪಟ್ಟಿ ಹೀಗಿದೆ
ನಾಲ್ಕು ಜನ ನಾಲ್ಕು ದಿಕ್ಕಿನಲ್ಲಿ ಪ್ರಚಾರ

ಬಹುಶಃ ದರ್ಶನ್, ಯಶ್, ಸುಮಲತಾ ಮತ್ತು ಅಭಿಷೇಕ್ ಅಂಬರೀಶ್ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡ್ತಾರೆ ಎನ್ನಲಾಗಿದೆ. ಆದ್ರೆ, ನಾಲ್ಕು ಜನರು ನಾಲ್ಕು ದಿಕ್ಕಿನಲ್ಲಿ ಪ್ರತ್ಯೇಕವಾಗಿ ಪ್ರಚಾರ ಮಾಡುವ ಸಾಧ್ಯತೆ ಇದೆಯಂತೆ. ಎಲ್ಲರೂ ಒಂದೆ ಕಡೆ ಪ್ರಚಾರ ಮಾಡಿದ್ರೆ, ಎಲ್ಲ ಊರುಗಳನ್ನ ತಲುಪಲು ಕಷ್ಟವಾಗುವ ಕಾರಣ, ಬಾಕಿ ಉಳಿದಿರುವ ದಿನದಲ್ಲಿ ಮಂಡ್ಯದ ಎಲ್ಲಾ ಕಡೆಯೂ ಜನರನ್ನ ಸೆಳೆಯುವುದು ಉದ್ದೇಶವಾಗಿದೆ.

ಪೂರ್ತಿ ಸಿನಿಮಾ ತೋರಿಸ್ತೀವಿ
ನಾನ್ ಸ್ಟಾಪ್ ಪ್ರಚಾರ

ಸಾಮಾನ್ಯವಾಗಿ ಸಿನಿಮಾ ನಟರು ಪ್ರಚಾರಕ್ಕೆಂದು ಬಂದ್ರೆ, ಒಂದು ದಿನ ಅಥವಾ ಎರಡು ದಿನ ಇರ್ತಾರೆ ಅಷ್ಟೇ. ಆದ್ರೆ, ಸುಮಲತಾ ಪರ ನಿಂತಿರುವ ದರ್ಶನ್ ಮತ್ತು ಯಶ್ ಪೂರ್ತಿ ಸಿನಿಮಾ ಮಾಡ್ತೀವಿ ಎಂದಿದ್ದರು. ಅದರಂತೆ 2ನೇ ತಾರೀಖಿನಿಂದ ನಾನ್ ಸ್ಟಾಪ್ ಪ್ರಚಾರ ಮಾಡಲು ಸಜ್ಜಾಗಿದ್ದಾರಂತೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article