2019ರ ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿ ಆಧರಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಜಗತ್ತಿನ 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. ಇದು ಅತ್ಯಂತ ಗಂಭೀರವಾದ ಪರಿಸ್ಥಿತಿ. ಭಾರತದಲ್ಲಿನ ಹಸಿವಿನ ಪ್ರಮಾಣ ತೀವ್ರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೋದಿಯವರು ಹೇಳುವಂತೆ ಭಾರತಕ್ಕಿನ್ನು ಅಚ್ಛೆ ದಿನ್ ಬಂದಿಲ್ಲ.ಈ ಸಂದರ್ಭದಲ್ಲಿ ನಾವು ದೇಶದ ಜನ ಹಸಿವಿನಿಂದ ಸಾಯಬೇಕು ಎಂದು ಬಯಸುತ್ತೇವೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.