ಮೊನ್ನೆ ಮೊನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಟ್ರೈಲರ್ ಬಗ್ಗೆ ಹಲವು ಕಡೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ
, ಕೆಲವರು ಟ್ರೈಲರ್ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಟೀಕಿಸುವುದರ ಮೂಲಕ ಮೋದಿಯವರನ್ನು ಅಲ್ಲಗಳೆದಿದ್ದಾರೆ.
ಆದ್ರೆ ಇದೀಗ ಮೋದಿ ಅವರ ಬಯೋಪಿಕ್ ಚಿತ್ರದ ಟ್ರೈಲರ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಸೌತ್ ಇಂಡಿಯಾದ ಸ್ಟಾರ್ ನಟನಾಗಿರುವ ಸಿದ್ದಾರ್ಥ್ ಹಂಚಿಕೊಂಡಿದ್ದು ಟ್ವೀಟ್ ಮಾಡುವ ಮೂಲಕ ಮೋದಿಯವರ ಕಾಲೆಳೆದಿದ್ದಾರೆ.
ಅಷ್ಟಕ್ಕೂ ಸಿದ್ದಾರ್ಥ್ ಮಾಡಿದ ಟ್ವೀಟ್ ನಲ್ಲಿ ಅಂತದ್ದೇನಿದೆ..? ಮುಂದೆ ಓದಿ..
”ಪಿ ಎಂ ನರೇಂದ್ರ ಮೋದಿ’ ಟ್ರೇಲರ್ ನಲ್ಲಿ ಮೋದಿ ಅವರು ಹೇಗೆ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬುದನ್ನು ತೋರಿಸುವುದನ್ನು ಮರೆತಿದ್ದಾರೆ.
ಒಂದು ವೇಳೆ ಅದನ್ನು ತೋರಿಸಿದ್ದರೆ ಜಾತ್ಯಾತೀತತೆ, ಕಮ್ಯೂನಿಸ್ಟ್, ನಕ್ಸಲರ ಮತ್ತು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಕಾಲೆಳೆಯಬಹುದಿತ್ತು. ಈ ಟ್ರೇಲರ್ ಒಂದು ಚೀಪ್ ಟ್ರಿಕ್ ತರ ಕಾಣುತ್ತಿದೆ.” ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಮಾತುಗಳ ಮೂಲಕ ಗೇಲಿ ಮಾಡಿದ್ದಾರೆ.