ಬಿಜೆಪಿಯ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.
ಭಾರತದಲ್ಲಿ ಮೋದಿಯವರ ಅಭೂತಪೂರ್ವ ಗೆಲುವಿನ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರನ್ನು ಭಾರತದ ನೆರೆಯ ರಾಷ್ಟ್ರದ ನಾಯಕರು ಈಗಾಗಲೆ ಅಭಿನಂದಿಸಿದ್ರು.
ಇದೀಗ ಈ ಸಾಲಿಗೆ ಪಾಕಿಸ್ತಾನದ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ‘ಬಿಜೆಪಿ ಹಾಗೂ ಎನ್ಡಿಎ ಮೈತ್ರಿ ಕೂಟದ ಚುನಾವಣಾ ಗೆಲುವಿಗೆ ನಾನು ಪ್ರಧಾನಿ ಮೋದಿಯವರನ್ನು ಅಭಿನಂದಿಸುತ್ತಿದ್ದೇನೆ.
ನಾನು ಮೋದಿಯವರ ಜೊತೆ ಶಾಂತಿ, ಪ್ರಗತಿ ಹಾಗೂ ಸಂಮೃದ್ಧಿಗಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಅಂತಾ ಟ್ವೀಟ್ ಮಾಡಿದ್ದಾರೆ.