ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ದಾರಿಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಾಗಿದ್ದಾರೆ. ಅರೆ, ಮೋದಿ, ರಜನಿಕಾಂತ್ ಹಾದಿಗೂ ಕೊಹ್ಲಿ ಹಾದಿಗೂ ಏನ್ ಸಂಬಂಧ? ಕೊಹ್ಲಿ ರಾಜಕಾರಣಕ್ಕೆ ಇಳಿದ್ರಾ? ಸಿನಿಮಾ ರಂಗಪ್ರವೇಶ ಮಾಡಿದ್ರಾ? ಅಥವಾ ಮೋದಿ, ರಜನಿ ಕಾಂತ್ ಅಂದ್ರಲ್ಲಾ? ರಾಜಕಾರಣ ಮತ್ತು ಸಿನಿಮಾ ಎರಡನ್ನೂ ಆಯ್ಕೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಮೂಡಿದ್ಯಾ? ಅದ್ಯಾವುದೂ ಅಲ್ಲ.. ಬದಲಾಗಿ ಕಾಡು ಸುತ್ತುವುದು!
ಪ್ರಧಾನಿ ನರೇಂದ್ರ ಮೋದಿ ಡಿಸ್ಕವರಿ ಚಾನಲ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೇರ್ ಗ್ರಿಲ್ಸ್ ಜೊತೆ ಕಾಡು ಸುತ್ತಿದ್ದನ್ನು ನೋಡಿದ್ದೀರಿ. ಅಲ್ಲದೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಗ್ರಿಲ್ಸ್ ಜೊತೆ ಕಾಡು ಸುತ್ತಿದ್ರು. ಅಂತೆಯೇ ಈಗ ಕೊಹ್ಲಿ ಮತ್ತು ನಟಿ ದೀಪಿಕಾ ಪಡುವೆ ದಿ ವೈಲ್ಡ್ ಕಾರ್ಯಕ್ರಮದಲ್ಲಿ ಗ್ರಿಲ್ಸ್ ಜೊತೆ ಕಾಡು ಸುತ್ತಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಸದ್ಯ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್,ರಜನಿಕಾಂತ್ ಕಾರ್ಯಕ್ರಮದ ಚಿತ್ರೀಕರಂ ನಡೀತಾ ಇದ್ದು, ಸದ್ಯದಲ್ಲೇ ವಿರಾಟ್ ಕಾಡು ಸುತ್ತಲಿದ್ದಾರೆ ಎನ್ನಲಾಗಿದೆ.