No menu items!
22.1 C
Munich
Thursday, July 23, 2026

ಕೆಜಿಎಫ್​ -2 ನಂತ್ರ ಯಶ್ ಸಿನಿಮಾ ಇದೇ….’ಮಪ್ತಿ’ ಡೈರೆಕ್ಟರ್ ಜೊತೆ ರಾಕಿಂಗ್ ಸ್ಟಾರ್..!

Must read

ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ 2 ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. 2018ರಲ್ಲಿ ರಿಲೀಸ್ ಆದ ಚಾಪ್ಟರ್ 1 ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲೂ ಅಬ್ಬರಿಸಿ ಸಿಕ್ಕಾಪಟ್ಟೆ ದೊಡ್ಡಮಟ್ಟಿಗೆ ಸದ್ದು ಮಾಡಿತು. ಆ ಸಿನಿಮಾ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆದ್ರೆ, ಉಗ್ರಂ ಬಳಿಕ ತಮ್ಮ ಎರಡನೇ ಸಿನಿಮಾದಲ್ಲೇ ಪ್ರಶಾಂತ್ ನೀಲ್ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸ್ರು ಮಾಡಿದ್ರು. ಕೆಜಿಎಫ್​ ರಿಲೀಸ್ ಆದ್ಮೇಲೆ ಸದ್ದು ಮಾಡಲಾರಂಭಿಸಿರೋದು ಕೆಜಿಎಫ್ ಚಾಪ್ಟರ್ 2.
ಈಗಾಗಲೇ ಚಿತ್ರದ ಮೇಲೆ ನಿರೀಕ್ಷೆ ಭಾರವಿದ್ದು, ಯಶ್​ ಬೇರೆ ಎಲ್ಲಾ ಸಿನಿಮಾಗಳನ್ನು ಬಿಟ್ಟು ಕೆಜಿಎಫ್​ಗಾಗಿಯೇ ಸಂಪೂರ್ಣ ಎಫರ್ಟ್​ ಹಾಕಿದ್ದಾರೆ. ಇನ್ನು ಕೆಜಿಎಫ್ -2 ಬಳಿಕ ಯಶ್ ಮುಂದಿನ ಚಿತ್ರ ಯಾವ್ದು ಅನ್ನೋ ಕುತೂಹಲ ಅಭಿಮಾನಿಗಳದ್ದು. ಅದಕ್ಕೀಗ ತೆರೆ ಬಿದ್ದಿದೆ.
ಯಶ್ ಕೆಜಿಎಫ್ ನಂತ್ರ ಕಿರಾತಕ -2 ಮಾಡ್ತಾರೆ ಅನ್ನೋ ಸುದ್ದಿ ಇತ್ತು. ಆ ಬಗ್ಗೆ ಈಗ ಮಾತು ತಣ್ಣಗಾಗಿದೆ. ಪುರಿ ಜಗನ್ನಾಥ್ ಅವರೊಡನೆ ಜನಗಣ ಮನ ಸಿನಿಮಾ ಮಾಡ್ತರೆಂಬ ಸುದ್ದಿ ಇತ್ತು. ಅದೂ ಕೂಡ ಈಗ ಸುದ್ದಿಯಲ್ಲಿಲ್ಲ. ಇದೀಗ ಮಫ್ತಿ ಡೈರೆಕ್ಟರ್ ನರ್ತನ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.
ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಮತ್ತು ರೋರಿಂಗ್ ಸ್ಟಾರ್​ ಶ್ರೀಮುರಳಿ ಜೊತೆ ಮಫ್ತಿ ಸಿನಿಮಾ ಮೂಲಕ ಕಮಾಲ್ ಮಾಡಿದ್ದ ಡೈರೆಕ್ಟರ್ ನರ್ತನ್ ನ್ಯಾಷನಲ್ ಸ್ಟಾರ್ ಯಶ್​ಗೆ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದು, ಶೀಘ್ರದಲ್ಲೇ ಅಧಿಕೃತವಾಗಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article