ಮೋದಿ ಸರ್ಕಾರಕ್ಕೆ ಅಮೆಜಾನ್ ಕೋಟ್ಯಾಂತರ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ

1
38

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8,546 ಕೋಟಿ ರೂಪಾಯಿಯ ಭ್ರಷ್ಟಾಚಾರ ನಡೆಸಿದೆ ಎಂದು ಎಐಸಿಸಿ ವಕ್ತಾರೆ, ರಾಜ್ಯ ಸಭೆ ಸದಸ್ಯೆ ಡಾ.ಅಮೀ ಯಜ್ನಿಕ್ ಆರೋಪಿಸಿದ್ದಾರೆ.

 

ಕರಾವಳಿ ಪ್ರವಾಸದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಅಮೀ ಯಜ್ನಿಕ್, ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರ ಜೀವನವನ್ನು ಕಸಿದುಕೊಳ್ಳಲು ಶ್ರೀಮಂತ ವರ್ಗಕ್ಕೆ ಸುಪಾರಿ ನೀಡಿದೆ. ದೇಶದ ಯುವ ಜನರಿಗೆ ಉದ್ಯೋಗ ಇಲ್ಲ. ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲ ಎಂದು ಹೇಳಿದರು.

“ಕೇಂದ್ರ ಸರ್ಕಾರಕ್ಕೆ ಅಮೇಜಾನ್ ಕಂಪೆನಿಯು 8,546 ಕೋಟಿ ರೂಪಾಯಿ ಲಂಚ ನೀಡಿದೆ. ಕಾನೂನು ಶುಲ್ಕದ (ಲೀಗಲ್ ಫೀಸ್) ಹೆಸರಿನಲ್ಲಿ ಅಮೇಜಾನ್ ಕಂಪೆನಿ ದೊಡ್ಡ ಪ್ರಮಾಣದ ಹಣ ನೀಡಿದೆ. ಆದರೆ ಹಣ ಯಾರಿಗೆ ಸಂದಾಯವಾಗಿದೆ? ಹೇಗೆ ಸಂದಾಯವಾಗಿದೆ? ಎಂಬುದು ತಿಳಿದಿಲ್ಲ. ಈ ಹಣದ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೂ ದಾಖಲೆಗಳನ್ನು ನೀಡಿಲ್ಲ. ಇದು ಅಮೇಜಾನ್ ಕಂಪೆನಿ ತಮ್ಮ ಪರ ಕಾನೂನು ರೂಪಿಸಲು ಕೇಂದ್ರಕ್ಕೆ ನೀಡಿದ ಲಂಚ” ಎಂದು ಅಮೀ ಯಜ್ನಿಕ್ ಆರೋಪ ಮಾಡಿದರು.

1 COMMENT

LEAVE A REPLY

Please enter your comment!
Please enter your name here