ನೂತನ ಸಂಸದ ಶಿವಕುಮಾರ್ ಉದಾಸಿಯವರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಸ್ವಾತಂತ್ರ್ಯದ ನಂತರ ಮಹಾತ್ಮ ಗಾಂಧಿಜೀಯವರು ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಸಲಹೆ ನೀಡಿದ್ದರು. ಆಗ ನೆಹರು ಅವರು ಒಪ್ಪದೇ 30-40 ವರ್ಷ ಅಧಿಕಾರದ ರುಚಿ ಅನುಭವಿಸಿದರು. ಈಗಾಗಲಾದರೂ ಕಾಂಗ್ರೆಸ್ ಗೌರವಯುತವಾಗಿ ಪಕ್ಷ ವಿಸರ್ಜನೆ ಮಾಡಲಿ ಎಂದರು.

ಈಗಾಗಲೇ ಮೋದಿ ಸುಂಟರಗಾಳಿಗೆ ಕಾಂಗ್ರೆಸ್ ಅರ್ಧ ಕೊಚ್ಚಿ ಹೋಗಿದೆ. ಮೋದಿ ಸುನಾಮಿಗೆ ಸಂಪೂರ್ಣ ಕೊಚ್ಚಿ ಹೋಗುವ ಮುನ್ನ ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು






