ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹುಟ್ಟು ಹಬ್ಬದಂದೇ ರಾಷ್ಟ್ರೀಯ ನಿರುದ್ಯೋಗ ದಿನವನ್ನು ಆಚರಣೆ ಮಾಡಿತ್ತು. ಅದರಂತೆ ಈ ವರ್ಷವೂ ಕೂಡಾ ಕಾಂಗ್ರೆಸ್ ಸೆಪ್ಟೆಂಬರ್ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದಂದು ರಾಷ್ಟ್ರೀಯ ನಿರುದ್ಯೋಗ ದಿನವನ್ನು ಆಚರಣೆ ಮಾಡುತ್ತಿದೆ. ಈ ದಿನಕ್ಕೆ ಕಳೆದ ಬಾರಿಯಂತೆ ಈ ಬಾರಿಯೂ ಅಧಿಕ ಉತ್ತಮ ಪ್ರತಿಕ್ರಿಯೆ ಲಭಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಮಾತ್ರವಲ್ಲದೇ ಎಲ್ಲಾ ವಿರೋಧ ಪಕ್ಷಗಳು ಇದೆ.
ಬಿಜೆಪಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹಿನ್ನೆಲೆ ಹ್ಯಾಪಿ ಬರ್ತ್‌ಡೇ ಪಿಎಂ ಲಸಿಕೆ ಬೂಸ್ಟರ್ ಅನ್ನು ನಡೆಸಲು ಈಗಾಗಲೇ ಸಿದ್ದತೆ ನಡೆಸಿದೆ. ಇದರಂತೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್‌ವರೆಗೂ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಹಿನ್ನೆಲೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಿದೆ. ಬಿಜೆಪಿಯು ಸುಮಾರು 20 ದಿನಗಳ ಸೇವಾ ಸಪ್ತಾಹ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಇದಕ್ಕೆ ಕಾಂಗ್ರೆಸ್‌ನ ತಿರುಗೇಟು ಎಂಬಂತೆ ನಿರುದ್ಯೋಗ ದಿನಾಚರಣೆಯನ್ನು ನರೇಂದ್ರ ಮೋದಿ ಜನ್ಮದಿನದಂದೇ ಆಚರಣೆ ಮಾಡುತ್ತಿದೆ.