ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಮಾತನಾಡಿದ ಮಾಜಿ ಸಚಿವ ಜಮೀರ್ ಅಹಮದ್ ಅವರು, ಯಡಿಯೂರಪ್ಪ ಜಾತ್ಯತೀತವಾಗಿರಲು ಸಾಧ್ಯವಿಲ್ಲ. ಅವರನ್ನು ಮುಸ್ಲಿಮ್ ಸಮುದಾಯ ನಂಬಬಾರದು ಎಂದು ಹೇಳಿದ್ದು ಈ ವಿಡಿಯೋ ವೈರಲ್ ಆಗಿದೆ.
ಕಳೆದ ತಿಂಗಳು ಮುಧೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಮೀರ್ ಅಹಮ್ಮದ್, ಯಡಿಯೂರಪ್ಪ ಹಿಂದೂ ಪರವಿಲ್ಲ, ಮುಸ್ಲಿಮರ ಪರವೂ ಇಲ್ಲ. ಯಡಿಯೂರಪ್ಪನವರಿಗೆ ಇರುವುದು ಕೇವಲ ಅಧಿಕಾರದ ಆಸೆ. ಯಡಿಯೂರಪ್ಪನವರನ್ನು ಮುಸ್ಲಿಮರು ನಂಬಬಾರದು ಎಂದು ತಿಳಿಸಿದ್ದಾರೆ.