ಇತ್ತೀಚೆಗಷ್ಟೇ ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಎರಡನೇ ಬಾರಿ ಪೂರ್ಣ ಸೊಂಕು ಪತ್ತೆಯಾಗಿರುವುದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಮೂರ್ನಾಲ್ಕು ದಿನಗಳಿಂದ ಜ್ವರ ಇದ್ದ ಕಾರಣ ಯಡಿಯೂರಪ್ಪನವರು ಕೊರೋನಾ ಪಿಷ್ಟ ಮಾಡಿಸಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಸೋಂಕು ಇರುವುದು ಕಂಡು ಬಂದಿದ್ದು ತಕ್ಷಣವೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆರೋಗ್ಯ ಸ್ಥಿರವಾಗಿದೆ.
ಆಸ್ಪತ್ರೆಯಲ್ಲಿ ಲವಲವಿಕೆಯಿಂದ ಇದ್ದಾರೆ. ಸಮಯ ಕಳೆಯಲು ಪುಸ್ತಕಗಳನ್ನು ಓದುತ್ತಿದ್ದಾರೆ. ಇಂದು ಬೆಳಗ್ಗೆ ಪತ್ರಿಕೆಗಳನ್ನು ತರಿಸಿಕೊಂಡು ಓದಿದ್ದಾರೆ. ಮನೆಯಲ್ಲಿದ್ದ ಪುಸ್ತಕಗಳನ್ನು ತರಿಸಿಕೊಂಡಿರುವ ಯಡಿಯೂರಪ್ಪ ಅದನ್ನು ಓದುತ್ತಿದ್ದಾರೆ. ಗಾಂಧೀಜಿ ಆತ್ಮಕಥೆ, ರವಿಬೆಳಗೆರೆ ಅವರ ಹಿಮಾಲಯನ್ ಬ್ಲಂಡರ್, ಶ್ರೀಕೃಷ್ಣ ಕಥಾಮಂಜರಿ ಪುಸ್ತಕಗಳು ಆಸ್ಪತ್ರೆಯಲ್ಲಿವೆ. ಎಂದು ಹೇಳಲಾಗುತ್ತಿದೆ.