ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಿರುವುದು ಉಮೇಶ್ ಕತ್ತಿಯವರ ಆಕ್ರೋಶಕ್ಕೆ ಕಾರಣವಾಗಿದ್ದು, ಜೊತೆಗೆ ಬೆಳಗಾವಿ ರಾಜಕಾರಣದಲ್ಲಿ ಇವರಿಬ್ಬರ ಗುಂಪುಗಳು ಎದುರಾಳಿಗಳಾಗಿದ್ದಾರೆ.ಹಾಗೂ ಸಚಿವ ಸಂಪುಟ ವಿಸ್ತರಣೆ ನಡೆದ ನಂತರ ಸಚಿವ ಸ್ಥಾನ ಸಿಗದೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು ಎಂಬ ಸುದ್ದಿ ಕೂಡ ರಾಜಕೀಯ ವಲಯದಲ್ಲಿ ಹರಿದಾಡ್ತಿತ್ತು .
ಹೀಗಾಗಿ ಯಡಿಯೂರಪ್ಪನವರು ಇಬ್ಬರ ಮಧ್ಯೆ ರಾಜಿ ಸಂಧಾನ ನಡೆಸಲು ಇಂದು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರೆನ್ನಲಾಗಿದ್ದು, ಆದರೆ ಸಂಧಾನದ ಬದಲಿಗೆ ಇಬ್ಬರ ಮಧ್ಯೆ ಜೋರು ಜೋರಾಗಿ ವಾಗ್ವಾದ ನಡೆದಿದೆ ಎನ್ನಲಾಗಿದೆ. ಕೊನೆಗೆ ಸಿಟ್ಟಿನಿಂದಲೇ ಹೊರ ಬಂದ ಉಮೇಶ್ ಕತ್ತಿ, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.