ಯಡಿಯೂರಪ್ಪ ನೀನು ಯಾಕಪ್ಪ: ಗುರು ಪ್ರಸಾದ್ ವಾಗ್ದಾಳಿ

Date:

ಸಿನಿಮಾ ನಿರ್ದೇಶಕ ಗುರುಪ್ರಸಾದ್ ಮತ್ತೊಮ್ಮೆ ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಫೇಸ್‌ಬುಕ್‌ ಲೈವ್ ಬಂದಿದ್ದ ಗುರು ಪ್ರಸಾದ್ ಈ ‘ಸರ್ಕಾರವೇ ಜನರನ್ನು ಕೊಲ್ಲುತ್ತಿದೆ, ಅಧಿಕಾರದ ಮೋಹದಿಂದ ಕನ್ನಡಿಗರನ್ನು ಸಾಯಿಸಿದ್ದಾರೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಮೋದಿ ಮುಖ ನೋಡ್ಕೊಂಡು ವೋಟ್ ಹಾಕಿದ್ವಿ, ಆದರೆ ಈವಯ್ಯಾ ಮಾಡ್ತಿರೋದು ಏನು? ನಮ್ಮ ವೋಟ್ ಕಸಕ್ಕೆ ಬಿದ್ದಂತೆ, ನಮಗೆ ಬೆಲೆ ಇಲ್ವಾ’ ಎಂದು ಗುರು ಪ್ರಸಾದ್ ಆಡಳಿತದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗುರುಪ್ರಸಾದ್, ಆರ್ ಅಶೋಕ್ ಕೆಲಸಕ್ಕೆ ಖಂಡಿಸಿದ್ದಾರೆ. ಮುಂದೆ ಓದಿ…

 

”ಯಡಿಯೂರಪ್ಪ ಹೇಳ್ತಾರೆ, ನಾನು ಜನರ ಸೇವೆ ಮಾಡ್ತಿದ್ದೀನಿ ಅಂತ. ಅವರು ಜನರ ಸೇವೆ ಮಾಡ್ತಿಲ್ಲ, ಅವರ ಮಗನ ಸೇವೆ ಮಾಡ್ತಿರೋದು. ಕೊರೊನಾದಿಂದ 29 ಸಾವಿರ ಕನ್ನಡಿಗರನ್ನು ಸಾಯಿಸಿದ್ದೀರಾ ನಿಮಗೆ ಏನು ಅನಿಸುತ್ತಿಲ್ವ? ವೋಟ್ ಹಾಕಿದವರಿಗೆ ಬೆಲೆ ಇಲ್ವೇ? ನಾವು ಮೋದಿ ಮುಖ ನೋಡ್ಕೊಂಡು ನಿಮಗೆ ವೋಟ್ ಹಾಕಿದ್ವಿ. ಇಷ್ಟು ಜನರನ್ನು ಸಾಯಿಸಿದ್ದೀರಾ, ನಿಮಗೆ ಪಶ್ಚತ್ತಾಪ ಇಲ್ಲವೇ ನಿಮಗೆ?” ಎಂದು ಗುರುಪ್ರಸಾದ್ ಫೇಸ್‌ಬುಕ್‌ಲೈವ್‌ನಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

”75 ವರ್ಷದ ಆದ್ಮೇಲೆ ಬಿಜೆಪಿಯಲ್ಲಿ ಅಧಿಕಾರ ಇಲ್ಲವಂತೆ. ಈ ಯಪ್ಪಾನಿಗೆ ಯಾವ ಕಾರಣಕ್ಕಾಗಿ ಇಟ್ಟುಕೊಂಡಿದ್ದಾರೆ. ಇವರೇ ನಮ್ಮ ಸೇವೆ ಮಾಡ್ಬೇಕು ಅಂತ ಏನೂ ಇಲ್ಲ. ಯಾರೋ ಚಿಕ್ಕವರು ಇದ್ದಾರೆ ಬಿಡಿ. ಒಂದು ಪಕ್ಷ ಆ ಜಮೀರ್ ಅಹ್ಮದ್‌ನ ಒಪ್ಪಿಕೊಳ್ಳುತ್ತೇನೆ, ಆತ ಸ್ವಂತ ದುಡ್ಡಿನ್ನು ಯಾರ್‌ ಯಾರಿಗೂ ಕೊಡ್ತಿದ್ದಾರೆ. ನಿಜಕ್ಕೂ ಅದ್ಭುತ” ಎಂದು ಬಿಎಸ್‌ವೈ ಆಡಳಿತ ವಿರೋಧಿಸಿದರು.

 

”29 ಸಾವಿರ ಜನರನ್ನು ಕೊಲೆ ಮಾಡಿದ್ದೀರಾ, ಮತ್ತೆ ಹೈಕಮಾಂಡ್ ಅಂತೀರಾ, ರೀ ನಾವು ಇಲ್ಲಿ ಹೈಕಮಾಂಡ್, ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಒಂದೂವರೆ ವರ್ಷದಿಂದ ಜನರನ್ನು ಕೂಡಿ ಹಾಕಿದ್ದೀರಾ. ನೀವು ಸರ್ಕಾರನಾ? ನಾಚಿಕೆ ಆಗ್ಬೇಕು. ಜನರನ್ನು ಬದುಕಲು ಬಿಟ್ಟು, ಅವರನ್ನು ಕೆಲಸ ಮಾಡೋಕೆ ಬಿಟ್ಟು, ನಾವು ಇದ್ದೇವೆ, ನಿಮಗೆ ಏನೇ ಸಮಸ್ಯೆಯಾದರೂ ನಾವು ನೋಡಿಕೊಳ್ಳುತ್ತೇವೆ ಎನ್ನಬೇಕು ಸರ್ಕಾರ” ಎಂದು ಗುರುಪ್ರಸಾದ್ ಕಿಡಿಕಾರಿದರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...