ಯಡ್ಡಿಯೂರಪ್ಪನಿಗೆ ಮತ್ತು ಮಗನಿಗೆ ಡಿಕೆಶಿ ಭಯಪಡಿಸಿಬಿಟ್ಟಿದ್ದಾರೆ: ಶಾಸಕ ಯತ್ನಾಳ್
ವಿಜಯಪುರ: ಯಡ್ಡಿಯೂರಪ್ಪನಿಗೆ ಮತ್ತು ಮಗನಿಗೆ ಡಿಕೆಶಿ ಭಯಪಡಿಸಿಬಿಟ್ಟಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನಾಗಿ ಮುಂದುವರೆಸಿದ್ರೆ ಕರ್ನಾಟಕದಲ್ಲಿ ಹೀನಾಯ ಸ್ಥಿತಿ ಬರುತ್ತದೆ.
ಮೊನ್ನೆ ವಿಜಯೇಂದ್ರನಿಗೆ ಬಗ್ಗೆ ಹೀನಾಯವಾಗಿ ಬೈದರೂ ಉತ್ತರ ಕೊಡಲಿಲ್ಲ. ಯಡ್ಡಿಯೂರಪ್ಪನಿಗೆ ಮತ್ತು ಮಗನಿಗೆ ಡಿಕೆಶಿ ಭಯಪಡಿಸಿಬಿಟ್ಟಿದ್ದಾರೆ. ನೀವೇನಾದರೂ ನಮ್ಮ ಹಗರಣ ಹೊರತೆಗೆದರೆ ನಿಮ್ಮ ಪೋಕ್ಸೋ ಕೇಸ್ ಇದೆ, ನಕಲಿ ಸಹಿ ಮಾಡಿದಿಯಾ, ಅವನೆಲ್ಲ ಹೊರತೆಗೆಯುತ್ತೇವೆ ಅಂತಾ ಹೆದರಿಸಿದ್ದಾರೆ. ಇಂತಹವರು ಬೇಕಾ ಅಂತಾ ನಾವು ಹೈಕಮಾಂಡ್‌ಗೆ ಕೇಳುತ್ತಿದ್ದೇವೆ ಎಂದರು.
ಇನ್ನೂ ಕುಟುಂಬಶಾಹಿ ರಾಜಕಾರಣ ಬಿಜೆಪಿಯಲ್ಲಿ ಕೊನೆಗೊಳ್ಳಬೇಕು. ಭ್ರಷ್ಟಾಚಾರ ಕುಟುಂಬ ಈ ರಾಜ್ಯದಿಂದ ತೊಲಗಬೇಕು. ಹಿಂದುತ್ವದ ಪರ ಇರುವ ನಾಯಕತ್ವ ಬರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಯಾರು ಕೂಡ ಹಿಂದೂತ್ವದ ರಕ್ಷಣೆ ಮಾಡಲಿಲ್ಲ. ಹಿಂದೂಗಳ ಕೊಲೆಯಾದರೂ ಯಾರು ಕೇಳಲಿಲ್ಲ. ಕೇವಲ ಕಠಿಣ ಕ್ರಮ ಅನ್ನೋದನ್ನು ಬಿಟ್ಟರೆ ಏನು ಮಾಡಲಿಲ್ಲ ಎಂದರು.