ಇಂದು ವಿಜಯಪುರ ದಲ್ಲಿ ಬಿಜೆಪಿ ಕಾರ್ಯಕ್ರಮವಿದ್ದು, ಆ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತೆರಳುತ್ತಿದ್ದಾರೆ. ಆದ್ರೆ ಈ ಮದ್ಯ ಮತ್ತೊಂದು ವಿವಾದ ಹುಟ್ಟುಕೊಂಡಿದೆ.ಈ ಕಾರ್ಯಕ್ರಮಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಬರುವುದಿಲ್ಲ ಅನ್ನೊ ಮಾತುಗಳು ಕೇಳಿಬರುತ್ತಿವೆ. ಯತ್ನಾಳ್ ಬಣದ ಕಾರ್ಪೊರೇಟರ್ಗಳು ಭಾಗವಹಿಸುತ್ತಾರಾ ಅನ್ನೋದೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ವಿಜಯಪುರ ನಗರಕ್ಕೆ ಆಗಮಿಸಲಿದ್ದಾರೆ. ಶಾಸಕ ಯತ್ನಾಳ್ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ವಿಜಯೇಂದ್ರ ಭಾಗವಹಿಸಲಿದ್ದಾರೆ. ಯತ್ನಾಳ್ ವಿರೋಧಿ ಬಣದಿಂದ ವಿಜಯೇಂದ್ರ ಅವರಿಗೆ ಸ್ವಾಗತ ಕೋರಲು ಭರ್ಜರಿ ತಯಾರಿ ನಡೆಸಲಾಗಿದೆ. ಅತ್ತ ಯಾವುದೇ ಸ್ವಾಗತ ಬ್ಯಾನರ್ ಹಾಕದೇ ಯತ್ನಾಳ್ ಬಣದಿಂದ ಟಾಂಗ್ ಕೊಟ್ಟಿದೆ. ಇತ್ತ ವಿಜಯೇಂದ್ರ ಸ್ವಾಗತ ಬ್ಯಾನರ್ಗಳಲ್ಲಿ ಯತ್ನಾಳ್ ಭಾವಚಿತ್ರಕ್ಕೆ ಕೊಕ್ ಕೊಡಲಾಗಿದೆ.
ಸ್ವಾಗತ ಕೋರುವ ಬ್ಯಾನರ್ಗಳಲ್ಲಿ ಯತ್ನಾಳ್ ಅವರ ಫೋಟೊ ಕಣ್ಮರೆಯಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಬರೋದಿಲ್ಲಾ ಎನ್ನೋ ಮಾತುಗಳು ಸಹ ಕೇಳಿಬರುತ್ತಿವೆ.