“ಯಮಲೋಕದಲ್ಲಿ 7 ದಿನ ಇದ್ದು ಬಂದಿದ್ದೇನೆ”!

Date:

ಮಂಗಳೂರು: ದೇಶಾದ್ಯಂತ ಕೊರೊನಾ ರೌದ್ರ ನರ್ತನ ಮುಂದುವರಿದಿದೆ. ರಾಜ್ಯದಲ್ಲೂ ಪ್ರತಿ ದಿನ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇಷ್ಟಾದರೂ ಕೆಲ ಸಾರ್ವಜನಿಕರು ಮಾತ್ರ ಎಚ್ಚೆತ್ತುಕೊಂಡಿಲ್ಲ. ನಗರದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದ್ದು, ಮಾಸ್ಕ್ ಹಾಕಲು ಹೇಳಿದ್ದಕ್ಕೆ ಮಹಿಳೆಯೊಬ್ಬರು ಹುಚ್ಚಾಟ ಪ್ರದರ್ಶನ ಮಾಡಿದ್ದಾರೆ.

ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಪಾಲಿಕೆ ಅಧಿಕಾರಿಗಳು ಮಾಸ್ಕ್ ಹಾಕಲು ಹೇಳಿದ್ದಕ್ಕೆ ಮಹಿಳೆ ಬೇಕಾಬಿಟ್ಟಿ ಮಾತನಾಡಿ, ಹುಚ್ಚಾಟ ಮೆರೆದಿದ್ದಾರೆ. ಅಧಿಕಾರಿಗಳು ಮಾಸ್ಕ್ ಕಾರ್ಯಾಚರಣೆ ನಡೆಸುವ ವೇಳೆ ಮಹಿಳೆಗೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಮಹಿಳೆ ಅನುಚಿತವಾಗಿ ವರ್ತಿಸಿದ್ದಾರೆ.

ನಾನು ಯಮ ಲೋಕಕ್ಕೆ ಹೋಗಿ ಬಂದಿದ್ದೇನೆ, ಗದೆ ಹಾಕಿಕೊಂಡು ಯಮಲೋಕಕ್ಕೆ ಹೋಗಿ, 7 ದಿನ ಇದ್ದು ಬಂದಿದ್ದೇನೆ. ಕೊರೊನಾ ನ್ಯೂಸ್ ನಲ್ಲಿ ಬಂದರೆ ಅದು ಡಸ್ಟ್ ಬೀನ್ ಗೆ ಬೀಳುತ್ತದೆ. ಇಲ್ಲದಿದ್ದರೆ ಕೊರೊನಾ ಹೋಗುವುದಿಲ್ಲ. ವೈರಸ್ ಮಾಡಿದ ಥರ್ಡ್ ಕ್ಲಾಸ್ ಯಾರವನು? ಎಂದು ಬೇಕಾಬಿಟ್ಟಿ ಮಾತನಾಡಿದ್ದು, ಮಹಿಳೆಯ ಹುಚ್ಚಾಟ ಕಂಡು ಅಧಿಕಾರಿಗಳಿಗೆ ಫುಲ್ ಶಾಕ್ ಆಗಿದೆ.

 

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...