ಯಶ್ ಪುತ್ರನ ಹೊಸ ಗೆಟಪ್..! ತನ್ನ ಗೆಟಪ್ ನೋಡಿ ತಲೆ ಮೇಲೆ ಕೈ ಇಟ್ಕೊಂಡ ಯಥರ್ವ್..!

Date:

ಸ್ಯಾಂಡಲ್‌ವುಡ್‌ನ ಸ್ಟಾರ್‌ ದಂಪತಿಗಳಾದ ‘ರಾಕಿಂಗ್‌ ಸ್ಟಾರ್‌’ ಯಶ್‌ ಮತ್ತು ರಾಧಿಕಾ ಪಂಡಿತ್‌ ಅವರ ಮಕ್ಕಳ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಪುತ್ರ ಯಥರ್ವ್‌ ಯಶ್‌ ಹೊಸ ಗೆಟಪ್‌ನಲ್ಲಿ ಇರುವ ಕೆಲವು ಫೋಟೋಗಳನ್ನು ಈಗ ರಾಧಿಕಾ ಶೇರ್‌ ಮಾಡಿಕೊಂಡಿದ್ದಾರೆ. ಅವು ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಒಂದು ಫೋಟೋದಲ್ಲಿ ಯಶ್‌ ಮತ್ತು ಯಥರ್ವ್‌ ಇದ್ದಾರೆ. ಮತ್ತೊಂದರಲ್ಲಿ ಯಥರ್ವ್‌ ಬೆರಗುಗಣ್ಣಿನ ನೋಟ ಬೀರಿದ್ದಾನೆ. ಈ ಫೋಟೋಗಳ ಜೊತೆ ರಾಧಿಕಾ ನೀಡಿರುವ ಕ್ಯಾಪ್ಷನ್‌ ಕೂಡ ಗಮನ ಸೆಳೆಯುತ್ತಿದೆ. ‘ಗೊತ್ತಾಗುವುದಕ್ಕೂ ಮುನ್ನ, ಗೊತ್ತಾದ ನಂತರ’ ಎಂದು ಅವರು ಬರೆದುಕೊಂಡಿದ್ದಾರೆ. ಅಂದರೆ, ತನ್ನ ಕೂದಲುಗಳನ್ನು ತೆಗೆಸಲಾಗಿದೆ ಎಂಬುದು ಗೊತ್ತಾದ ಬಳಿಕ ಯಥರ್ವ್‌ ತಲೆ ಮೇಲೆ ಕೈ ಹೊತ್ತು ಕುಳಿತಿರುವಂತೆ ಕಾಣುತ್ತಿದ್ದಾನೆ.

ಸದ್ಯ ಈ ಫೋಟೋಗಳು ವೈರಲ್‌ ಆಗುತ್ತಿವೆ. ಕೆಲವೇ ದಿನಗಳ ಹಿಂದೆ ಕೂಡ ಆಯ್ರಾ ಮತ್ತು ಯಥರ್ವ್‌ ಜೊತೆಗಾಗಿ ಆಟ ಆಡುತ್ತಿರುವ ಕೆಲವು ಫೋಟೋಗಳನ್ನು ರಾಧಿಕಾ ಅಪ್‌ಲೋಡ್‌ ಮಾಡಿದ್ದರು. 2019ರ ಅಕ್ಟೋಬರ್‌ 30ರಂದು ಜನಿಸಿದ ಯಥರ್ವ್‌ನ ಮೊದಲ ವರ್ಷದ ಜನ್ಮದಿನವನ್ನು ದೊಡ್ಡದಾಗಿ ಆಚರಿಸಲು ಈ ಬಾರಿ ಲಾಕ್‌ಡೌನ್‌ ನಿಯಮಾವಳಿಗಳು ಅಡ್ಡಿ ಆಗಿದ್ದವು. ಹಾಗಾಗಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತರ ಜೊತೆ ಸೇರಿ ಹಡಗಿನ ಮೇಲೆ ಆಚರಿಸಲಾಗಿತ್ತು.

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...