ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ ರಾಧಿಕ ಯಶ್ ಮತ್ತು ಯಶ್ ಅವರ ಪುತ್ರಿ ಐರಾ ತನ್ನ ಅಪ್ಪ ಮತ್ತು ಅಮ್ಮ ಳನ್ನು ಫೋಟೋದಲ್ಲಿ ಗುರುತು ಹಿಡಿಯುವ ವಿಡಿಯೋ. ಹೌದು ಕೇವಲ ಹತ್ಯೆ ತಿಂಗಳಿಗೆ ಯಶ್ ಅವರ ಪುತ್ರಿ ಐರಾ ತನ್ನ ತಂದೆ ಮತ್ತು ತಾಯಿಯನ್ನು ಫೋಟೋದಲ್ಲಿ ಗುರುತಿಸುವುದರ ಮೂಲಕ ಸಂಭ್ರಮಿಸುತ್ತಿರುವ ವಿಡಿಯೋವನ್ನು ರಾಧಿಕಾ ಯಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಈ ವಿಡಿಯೋದಿಂದ ಇದೀಗ ಕನ್ನಡಿಗರು ಕೆರಳಿದ್ದು ವಿಡಿಯೋದಲ್ಲಿ ರಾಧಿಕಾ ಯಶ್ ಅವರು ತಮ್ಮ ಮಗಳೊಂದಿಗೆ ಕನ್ನಡ ಮಾತನಾಡದೇ ಕೊಂಕಣಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಾಮೆಂಟ್ ಹಾಕಿದ್ದಾರೆ. ಮೇಡಂ ನಿಮ್ಮ ಮಗಳೊಂದಿಗೆ ಕನ್ನಡದಲ್ಲಿ ಮಾತನಾಡಿ ಆಕೆಗೆ ಕನ್ನಡವನ್ನು ಕಲಿಸಿ ಎಂದು ರಾಧಿಕಾ ಯಶ್ ಅವರಿಗೆ ಕಾಮೆಂಟ್ಗಳನ್ನು ಜನ ಮಾಡಿದ್ದಾರೆ. ಇನ್ನು ಈ ಎಲ್ಲ ಕಾಮೆಂಟ್ ಗಳಿಗೆ ಸಂಬಂಧಿಸಿದಂತೆ ರಿಪ್ಲೈ ನೀಡಿರುವ ರಾಧಿಕಾ ಯಶ್ ಅವರು ಐರಾಳ ತಂದೆಯ ಮಾತೃಭಾಷೆ ಕನ್ನಡ & ತಾಯಿಯ ಮಾತೃ ಭಾಷೆ ಕೊಂಕಣಿ ಈ ಎರಡು ಭಾಷೆಗಳಿಗೂ ಸಹ ಐರಾ ತುಂಬಾ ಚೆನ್ನಾಗಿಯೇ ಸ್ಪಂದಿಸುತ್ತಾಳೆ ಡೌಟ್ ಇರುವವರು ನೋಡಿಕೊಳ್ಳಿ ಎಂದು ಹೇಳಿದ್ದಾರೆ.