ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರಲ್ಲಿದೆ. ಕೆಜಿಎಫ್ ನಂತಹ ಬಿಗ್ ಸಿನಿಮಾ ಮಾಡಿದ ಮೇಲೆ ಯಶ್ ತಮ್ಮ ಮುಂದಿನ ಸಿನಿಮಾವನ್ನು ಯಾವ ನಿರ್ದೇಶಕನ ಜೊತೆ ಮಾಡಲಿದ್ದಾರೆ ಎಂಬ ಕುತೂಹಲ ಇದೆ. ಯಶ್ ಅವರು ಮಫ್ತಿ ಸಿನಿಮಾ ಖ್ಯಾತಿಯ ನರ್ತನ್ ಅವರ ಜೊತೆ ಯಶ್ ಅವರು ತಮ್ಮ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಆದರೆ ಇದೀಗ ಬಂದಿರುವ ದೊಡ್ಡದೊಂದು ಸುದ್ದಿ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುಂದಿನ ಸಿನಿಮಾವನ್ನು ತಮಿಳಿನ ಸ್ಟಾರ್ ನಿರ್ದೇಶಕರ ಜೊತೆ ಮಾಡಲಿದ್ದಾರೆ. ಹೌದು ಎಂದಿರಾನ್, ರೋಬೋ 2.0, ಐ ಖ್ಯಾತಿಯ ನಿರ್ದೇಶಕರಾದ ಶಂಕರ್ ಅವರ ಜೊತೆ ರಾಕಿಂಗ್ ಸ್ಟಾರ್ ಯಶ್ ಅವರು ಸಿನಿಮಾವನ್ನ ಮಾಡಲಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಯಶ್ ಅವರಿಗೆ ಶಂಕರ್ ಅವರ ಕಥೆ ಹಿಡಿಸಿದ್ದು ಇವರಿಬ್ಬರ ಕಾಂಬಿನೇಶನ್ ನಲ್ಲಿ ಸಿನಿಮಾ ಬರುವುದು ಪಕ್ಕಾ ಎಂದು ಹೇಳಲಾಗುತ್ತಿದೆ..