ಸಿಡ್ನಿ: ಆಸ್ಟ್ರೇಲಿಯಾದ ಲಿಮಿಟೆಡ್ ಓವರ್‌ಗಳ ನಾಯಕ ಆ್ಯರನ್ ಫಿಂಚ್ ಅವರನ್ನು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನ ವೇಳೆ ಯಾವುದೇ ಫ್ರಾಂಚೈಸಿಗಳು ಖರೀದಿಸಲಿಲ್ಲ. ವಿಶ್ವದ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡಿರುವ ಫಿಂಚ್ ಸೇಲಾಗದೆ ಉಳಿದಿದ್ದು ಸಹಜವಾಗೇ ಅಚ್ಚರಿ ಮೂಡಿಸಿತ್ತು.
ತಾನು ಐಪಿಎಲ್ ಹರಾಜಿನಲ್ಲಿ ಖರೀದಿಯಾಗದ ಬಗ್ಗೆ ಆ್ಯರನ್ ಫಿಂಚ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮತ್ತೆ ಆಡುವಂತಾಗಿದ್ದರೆ ಚೆನ್ನಾಗಿರುತ್ತಿತ್ತು. ಭಾಗವಹಿಸುತ್ತಿದ್ದರೆ ಐಪಿಎಲ್ ಒಂದು ಅದ್ಭುತ ಸ್ಪರ್ಧೆ. ಆದರೆ ಪ್ರಮಾಣಿಕವಾಗಿ ಹೇಳೋದಾದ್ರೆ ನನ್ನನ್ನು ಯಾರೂ ಆರಿಸಲಾರರು ಎಂದು ನಿರೀಕ್ಷಿಸಿರಲಿಲ್ಲ,’ ಎಂದಿದ್ದಾರೆ.
ಕಳೆದ ಐಪಿಎಲ್ ಸೀಸನ್‌ನಲ್ಲಿ ಆ್ಯರನ್ ಫಿಂಚ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಆರ್‌ಸಿಬಿಯಲ್ಲಿ ಫಿಂಚ್ ಅಂಥ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಫಿಂಚ್ ಮೂಲಬೆಲೆ 1 ಕೋ.ರೂ. ಆಗಿದ್ದರಿಂದ ಈ ಬಾರಿ ಖರೀದಿಸಲು ಫ್ರಾಂಚೈಸಿಗಳು ಮುಂದೆ ಬಂದಿರಲಿಲ್ಲ.