ಮಂಡ್ಯ: ನಾನು ಯಾವುದೇ ಪಕ್ಷದ ಪರವಾಗಿ ಬರಲ್ಲ. ನಾನು ಬರೋದು ವ್ಯಕ್ತಿ ಪರವಾಗಿ ಎಂದು ನಟ ದರ್ಶನ್ ಹೇಳಿದರು. ಬೆಳಗ್ಗೆಯಿಂದ ಮಂಡ್ಯ ಕ್ಷೇತ್ರದಲ್ಲಿ ರೋಡ್ ಶೋ ಮತ್ತು ಮತಯಾಚನೆ ವೇಳೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರವಾಗಿ ಬರಲ್ಲ. ನಾನು ಬರೋದು ವ್ಯಕ್ತಿ ಪರವಾಗಿ. ಐದು ವರ್ಷದ ಹಿಂದೆ ನರೇಂದ್ರಸ್ವಾಮಿ ಸಹಾಯ ಮರೆಯಲ್ಲ. ಮೊದಲೇ ಶಾಸಕ ಉದಯ್ ಹೇಳಿದ್ರು ಸುಮಮ್ಮನಿಗೆ ಟಿಕೆಟ್ ಆಗಲಿಲ್ಲ.
ಆದ್ರೆ ನಮಗೆ ಮಾಡಿ ಅಂದಿದ್ರು. ಮೊದಲು ಅವರು ಕೇಳಿದ ಕಾರಣ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್ ಚಂದ್ರು ಅವರಿಗೆ ಎಲ್ಲರೂ ಮತ ಹಾಕಿ ಎಂದಿದ್ದಾರೆ. ಹಲಗೂರು ಗ್ರಾಮಕ್ಕೆ ದರ್ಶನ್ ಬರುತ್ತಿದ್ದಂತೆಯೇ ಅಭಿಮಾನಿಗಳಿಂದ ಜೈಕಾರ ಕೇಳಿ ಬಂತು. ಡಿ ಬಾಸ್ ಡಿ ಬಾಸ್ ಘೋಷಣೆ ಮೊಳಗಿಸಿ ಸಂಭ್ರಮಿಸಿದ್ದಾರೆ ಅಭಿಮಾನಿಗಳು. ಬೃಹತ್ ಗುಲಾಬಿ ಹೂವಿನ ಹಾರ ಸಮರ್ಪಣೆ ಕೂಡ ಮಾಡಿದ್ದಾರೆ. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ನೆಚ್ಚಿನ ನಟನಿಗೆ ಸ್ವಾಗತ ನೀಡಿದ್ದಾರೆ.
ಯಾವುದೇ ಪಕ್ಷದ ಪರವಾಗಿ ಬರಲ್ಲ. ನಾನು ಬರೋದು ವ್ಯಕ್ತಿ ಪರವಾಗಿ: ನಟ ದರ್ಶನ್
Date: