ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಹಿರಂಗ ಬಟ್ಟಿ ಇನ್ನು ನೀಡಿಲ್ಲ ಆದರೆ ಒಳ ಮಾತುಕತೆ ನೆಡೆಯುತಲೇ ಇದೆ ಎಂದು ಹೇಳಲಾಗುತ್ತಿತ್ತು, ಇನ್ನು ವಿರೋಧ ಪಕ್ಷದವರು ಈ ವಿಚಾರದಲ್ಲಿ ಟೀಕೆ ಮಾಡುತ್ತಲೆ ಇದ್ದರು ತಲೆ ಕೆಡಿಸಿಕೊಳ್ಳದ ಯಡಿಯೂರಪ್ಪ, ಇದೀಗ ಸಂಪುಟ ಸೇರಲು ಆಹ್ವಾನ ಹಿನ್ನೆಲೆ ಸುಳ್ಯ ಕ್ಷೇತ್ರದ ಶಾಸಕ ಎಸ್ ಅಂಗಾರ,
ನಾನು ಆರು ಬಾರಿ ಗೆಲ್ಲಿಸಿದ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ
ಸಂಘ ನನ್ನ ಈ ಮಟ್ಟಕ್ಕೆ ಬೆಳೆಸಿದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ವತಃ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು ಹಾಗು ವರಿಷ್ಠರು ಮತ್ತು ಯಡಿಯೂರಪ್ಪ ಎಲ್ಲ ಸೇರಿ ಅವಕಾಶ ಮಾಡಿಕೊಟ್ಟಿದ್ದಾರೆ ನನಗೆ ಯಾವ ಖೋಟಾದಲ್ಲಿಯೂ ಸಚಿವ ಸ್ಥಾನ ಕೊಟ್ಟಿಲ್ಲ, ಸಂಘಟನೆ ನೋಡಿ ಕೊಟ್ಟಿದ್ದಾರೆ ಯಾವುದೇ ಸಚಿವ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ, ಇದೇ ಖಾತೆ ಬೇಕು ಎಂದು ಕೇಳುವುದಿಲ್ಲ ನನ್ನ ಕ್ಷೇತ್ರದ ಜನ ಮತ್ತು ಯಡಿಯೂರಪ್ಪ ಹಾಗೂ ಸಂಘಟನೆಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.