ಬೆಳಗಾವಿ: ಮೇ ಬಳಿಕ ಸರ್ಕಾರ ಪತನ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ -ಜೆಡಿಎಸ್ನವರು ಪಾಪ ನೀರಿನಿಂದ ತೆಗೆದ ಮೀನಿನ ರೀತಿ ವಿಲಿವಿಲಿ ಎಂದು ಒದ್ದಾಡುತ್ತಿದ್ದಾರೆ. ಅವರು ಭ್ರಮಾ ಲೋಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆ ಪ್ರಸ್ತಾಪಿಸಿದರೂ ಉತ್ತರ ಕೊಡೋಕೆ ಸರ್ಕಾರ ತಯಾರಿದೆ. ನಾವು ಯಾವುದಕ್ಕೂ ವಿಳಂಬ ಮಾಡೋದಾಗಲಿ, ಕಾಲಹರಣ ಮಾಡಲ್ಲ. ಇವತ್ತು ಬರಗಾಲದ ಬಗ್ಗೆ ಚರ್ಚೆಯಾಗುತ್ತಿದ್ದು, ಉತ್ತರ ಕೊಡುತ್ತಿದ್ದೇವೆ.
ಯಾವುದೇ ಸಮಸ್ಯೆ ಪ್ರಸ್ತಾಪಿಸಿದರೂ ಉತ್ತರ ಕೊಡೋಕೆ ಸರ್ಕಾರ ತಯಾರಿದೆ !
Date: