ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

Date:

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

ಈಗಾಗಲೇ ನಿಮ್ಗೆ ಗೊತ್ತಿದೆ, ಭಾನುವಾರ ಸೂರ್ಯಗ್ರಹಣ ಅಂತ. ಹಿಂದೂ ಪಂಚಾಂಗದ ಪ್ರಕಾರ ಶಾರ್ವರಿ ನಾಮ ಸಂವತ್ಸರದ ಜೇಷ್ಠ ಮಾಸ ಕೃಷ್ಣ ಪಕ್ಷದ ಅಮವಾಸ್ಯೆಯ ದಿವಸ (ಜೂನ್ 21)ರಂದು ಸೂರ್ಯಗ್ರಹಣ ಸಂಭವಿಸಲಿದೆ .  ಎಲ್ಲಾ ಗ್ರಹಣಗಳು ಕೂಡ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ . ಅಂತೆಯೇ ಈ ಗ್ರಹಣ ಕೂಡ ರಾಶಿಗಳ ಮೇಲೆ ಪರಿಣಾಮ ಬೀರ್ತೀದೆ .

ನಿಜ ಗ್ರಹಣ ಖಗೋಳದಲ್ಲಿ ನಡೆಯುವ ಪ್ರಕ್ರಿಯೆಯೇ. ಹಾಗಂತ ನಾವು ಹಿಂದಿನಿಂದ ನಂಬಿಕೊಂಡು ಬಂದಿರುವ ಜ್ಯೋತಿಷ್ಯ ದೃಷ್ಟಿಕೋನವನ್ನು ಮಾತ್ರ ತಳ್ಳಿ ಹಾಕುವಂತಿಲ್ಲ . ಆ ದಿಕ್ಕಿನಲ್ಲಿ ನೋಡೋದಾದ್ರೆ ಸೂರ್ಯನು ಜೂನ್ 14ರಂದು ಮಿಥುನ ರಾಶಿಯನ್ನು ಪ್ರವೇಶಿಸಿದ್ದು,  ಈ ಗ್ರಹಣ ನಡೆಯೋದು ಮಿಥುನ ರಾಶಿ, ಮೃಗಶಿರಾ ನಕ್ಷತ್ರದಲ್ಲಿ . ಆದ್ರಿಂದ ಈ ರಾಶಿ, ನಕ್ಷತ್ರದ ಮೇಲೆ ಗ್ರಹಣದ ಪ್ರಭಾವ ಹೆಚ್ಚಿರುತ್ತೆ . ಜೂನ್ 21ರ ಗ್ರಹಣದ ನಂತರ ಸೂರ್ಯ ಆರಿದ್ರಾ ನಕ್ಷತ್ರ ಪ್ರವೇಶಿಸುತ್ತಾನೆ . ಚಿತ್ತಾ, ಧನಿಷ್ಠಾ, ಆರಿದ್ರಾ ಮತ್ತು ರೋಹಿಣಿ ನಕ್ಷತ್ರದ ಮೇಲೆ ಪ್ರಭಾವ ಬೀರ್ತಾನೆ.

 

ಮಿಥುನ ರಾಶಿಯಲ್ಲಿ ನಡೆಯುವ ಗ್ರಹಣ ಯಾವ ರಾಶಿ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ನೋಡುವುದಾದರೆ ಸಿಂಹ, ಕನ್ಯಾ, ಮಕರ ಮತ್ತು ಮೇಷ ರಾಶಿಗಳಿಗೆ ಶುಭಫಲವಿದೆ . ತುಲಾ, ಧನಸ್ಸು, ಕುಂಭ ಮತ್ತು ವೃಷಭ ರಾಶಿಗಳಿಗೆ ಮಿಶ್ರಫಲವಿದೆ . ಮಿಥುನ, ಕಟಕ, ವೃಶ್ಚಿಕ ಹಾಗೂ ಮೀನ ರಾಶಿಗಳಿಗೆ ಅಶುಭಫಲಗಳು ಗೋಚರವಾಗುತ್ತಿವೆ .

 

ಗ್ರಹಣದ ವೇಳೆ ಏನ್ಮಾಡ್ಬೇಕು ?

ಸೂರ್ಯಗ್ರಹಣಕ್ಕೂ ಮೊದಲು ಸ್ನಾನ ಮಾಡಿ, ದೇವರನ್ನು ಪ್ರಾರ್ಥಿಸಬೇಕು . ಇಷ್ಟ ದೇವರ ಮಂತ್ರ ಜಪಿಸುವುದು ಒಳ್ಳೆಯದು . ಶನಿವಾರ ರಾತ್ರಿ 10 ಗಂಟೆ 4 ನಿಮಿಷಕ್ಕೆ ಗ್ರಹಣ ಸೂತಕ ಕಾಲವು ಆರಂಭವಾಗುತ್ತದೆ. ಆದ್ದರಿಂದ ಈ ಸಮಯದವರೆಗೂ ಆಹಾರ ಸೇವಿಸಬಹುದು. ಗ್ರಹಣ ಸ್ಪರ್ಶಕಾಲ ಭಾನುವಾರ ಬೆಳಗ್ಗೆ 10 ಗಂಟೆ 4 ನಿಮಿಷದಿಂದ ಆರಂಭವಾಗುವುದರಿಂದ ತದನಂತರ ಯಾವುದೇ ಆಹಾರ ಸೇವನೆ ಮಾಡಬಾರದು. ಆದರೆ ಗರ್ಭಿಣಿಯರಿಗೆ, ವೃದ್ಧರಿಗೆ ಹಾಗೂ ಮಕ್ಕಳಿಗೆ ಆಹಾರ ಸೇವನೆಯಲ್ಲಿ ವಿನಾಯಿತಿಯಿದೆ. ಉಳಿದಂತಹ ಆಹಾರವನ್ನು ವ್ಯರ್ಥ ಮಾಡಬಾರದೆಂದಿದ್ದರೆ ತುಳಸಿ ದಳವನ್ನು ಹಾಕಿಡಬಹುದು. ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಹೊರಬರದಿರುವುದು ಒಳ್ಳೆಯದು . ಜೊತೆಗೆ ಯಾರೂ ಕೂಡಾ ಬರಿಗಣ್ಣಿನಿಂದ ಗ್ರಹಣವನ್ನು ನೋಡುವ ಸಾಹಸ ಮಾಡದಿರಿ.

ಅಷ್ಟೇ ಅಲ್ಲದೆ ಗ್ರಹಣದ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು. ಗ್ರಹಣವು ಅಶುಭವೆಂದು ಪರಿಗಣಿಸಲಾಗುವುದರಿಂದ, ಈ ಸಮಯದಲ್ಲಿ ಗರ್ಭಧಾರಣೆಯಾದರೆ ಹುಟ್ಟಿದ ಮಗುವಿಗೆ ತೊಂದರೆಯಾಗಬಹುದೆಂಬ ನಂಬಿಕೆ ಇದೆ

ಗ್ರಹಣ ಮೋಕ್ಷ (ಮಧ್ಯಾಹ್ನ 1.22) ಬಳಿಕ ಮನೆಯನ್ನು ಶುದ್ಧಿ ಮಾಡಿ, ಸ್ನಾನ ಮಾಡಿ, ದೇವರ ಕೋಣೆಯನ್ನು ಕೂಡ ಗಂಗಾಜಲದಿಂದ ಶುದ್ಧಗೊಳಿಸಿ.

ಸಾಮಾನ್ಯ ಕುಟುಂಬದ ವ್ಯಕ್ತಿ 4ಸಾವಿರ ಕೋಟಿ ಮೌಲ್ಯದ ಕಂಪನಿ ಒಡೆಯ ಆಗಿದ್ದೇಗೆ?

17ನೇ ವಯಸ್ಸಿಗೆ ಕಾಲೇಜು ಡ್ರಾಪ್ಔಟ್; 22ರಲ್ಲಿ ಕೋಟಿ ಕೋಟಿ ಒಡೆಯ!

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...