ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು:- ಸ್ಪೀಕರ್ ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಯುಟಿ ಖಾದರ್ ಅವರು ಆಡಳಿತ ಸುಧಾರಣೆ ಭಾಗವಾಗಿ ಭ್ರಷ್ಟಾಚಾರದ ಪ್ರಕರಣ ಆಗಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿದೆ. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸುವಂತೆ ನಾನು ಒತ್ತಾಯ ಮಾಡಿದ್ದೇನೆ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ ಎಂದಿದ್ದಾರೆ.
ಸ್ಪೀಕರ್ ಸ್ಥಾನ ಸಂವಿಧಾನ ಬದ್ಧವಾಗಿ ಗೌರವದ ಪೀಠದ ಘನತೆ-ಗೌರವಕ್ಕೆ ಚ್ಯುತಿ ಆಗ್ತಿದೆ. ಈಗಲೂ ನಾನು ಹೇಳ್ತೀನಿ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ. ತನಿಖೆ ಆಧಾರದಲ್ಲಿ ಯುಟಿ ಖಾದರ್ ಅವರು ಎಲ್ಲಾ ಆರೋಪದಿಂದ ಮುಕ್ತರಾಗಲಿ ಎಂದು ಆಶಿಸುತ್ತೇನೆ. ನ್ಯಾಯಾಧೀಶರ ತನಿಖೆ ಆದಾಗ ನ್ಯಾಯಾಧೀಶರು ಅಪೇಕ್ಷೆಪಟ್ಟರೆ ದಾಖಲಾತಿ ಕೊಡುವ ಬಗ್ಗೆ ನಾವು ನೋಡ್ತೀವಿ ಎಂದು ಹೇಳಿದ್ದಾರೆ.
ಕಾಗೇರಿ ಅವರು ಮಾಡಿರುವ ಆರೋಪ ಮಾಜಿ ಸ್ಪೀಕರ್‌ಗಳಿಗೆ ಮಾಡ್ತಿರೋ ಅಪಮಾನ ಎಂಬ ಖಾದರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಭಿಪ್ರಾಯಗಳು ಹೇಳೋಕೆ ನಮಗೆ ಸ್ವಾತಂತ್ರ‍್ಯ ಇದೆ.ನಾನು ಹೇಳೋದು ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಲಿ ಎಂದು ತಿಳಿಸಿದ್ದಾರೆ.



