ಯುವರತ್ನ ಡೈಲಾಗ್ ಕೇಳಿ ಸರ್ಕಾರಕ್ಕೆ ಉರಿ??

0
47

ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿ ಫ್ಯಾಮಿಲಿ ಆಡಿಯೆನ್ಸ್ ಗಳಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ತುಂಬಿದ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಬಹುದು ಎಂದು ಹೇಳಿದ್ದ ಸರ್ಕಾರ ಯುವರತ್ನ ಚಿತ್ರ ಬಿಡುಗಡೆಯಾದ ಎರಡೇ ದಿನದಲ್ಲಿ ತನ್ನ ಮಾತನ್ನು ತಪ್ಪಿದೆ.

 

ನಾಳೆಯಿಂದಲೇ ಚಿತ್ರಮಂದಿರದಲ್ಲಿ ಅರ್ಧದಷ್ಟು ಮಾತ್ರ ವೀಕ್ಷಕರಿಗೆ ಅವಕಾಶವನ್ನು ನೀಡಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಅರೆ ಇಷ್ಟು ದಿನ ಸುಮ್ಮನಿದ್ದು ಚಿತ್ರ ಬಿಡುಗಡೆ ಮಾಡಿ ಪ್ರಾಬ್ಲಮ್ ಇಲ್ಲ ಎಂದು ಇದೀಗ ಸಡನ್ನಾಗಿ ಈ ರೀತಿ ಚಿತ್ರಮಂದಿರದ ಮೇಲೆ ನಿಷೇಧ ಹೇರಿದರೆ ಹೇಗೆ ಎಂದು ಪುನೀತ್ ಅಭಿಮಾನಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಇನ್ನು ಯುವರತ್ನ ಚಿತ್ರದಲ್ಲಿ ಸರ್ಕಾರ ಮತ್ತು ರಾಜಕಾರಣಿಗಳ ನಿಜ ಸ್ವರೂಪವನ್ನು ಒಂದು ಡೈಲಾಗ್ ಮೂಲಕ ಹೇಳಲಾಗಿದೆ. ರಾಜಕಾರಣಿಗಳಿಗೆ 2 ಮುಖ, 2 ನಾಲಿಗೆ & 2 ಕುಟುಂಬಗಳು ಇರುತ್ತವೆ ಎಂದು ಸಂಭಾಷಣೆಯ ಮೂಲಕ ರಾಜಕೀಯ ವ್ಯಕ್ತಿಗಳಿಗೆ ಯುವರತ್ನ ಚಿತ್ರದಲ್ಲಿ ಭರ್ಜರಿ ಟಾಂಗ್ ನೀಡಲಾಗಿತ್ತು. ಸಿನಿಮಾದಲ್ಲಿ ಶಿಕ್ಷಣ ಮಂತ್ರಿಗೆ ಈ ಸಂಭಾಷಣೆ ಇದೆ ಇದನ್ನ ಪ್ರಸ್ತುತ ಇರುವ ರಾಜಕಾರಣಿಗಳು ವೈಯಕ್ತಿಕವಾಗಿ ತೆಗೆದುಕೊಂಡು ಯುವರತ್ನ ಚಿತ್ರದ ಮೇಲೆ ಹಗೆ ಸಾಧಿಸಿ ಅರ್ಧದಷ್ಟೂ ಚಿತ್ರಮಂದಿರಗಳನ್ನು ಮಾತ್ರ ತೆರೆಯುವಂತೆ ಹೊಸ ನಿಯಮವನ್ನು ದಿಡೀರನೆ ಸರ್ಕಾರ ಘೋಷಿಸಿದೆ ಎಂದು ಸಿನಿಪ್ರೇಕ್ಷಕರು ಸರ್ಕಾರದ ಕಾಲನ್ನು ಎಳೆಯುತ್ತಿದ್ದಾರೆ.

 

 

ಸಿನಿಪ್ರೇಕ್ಷಕರು ಈ ರೀತಿಯ ಮಾತನ್ನ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಏಕೆಂದರೆ ಬಿಡುಗಡೆಗೂ ಮುನ್ನ ಯಾವುದೇ ರೀತಿಯ ನಿಯಮಗಳನ್ನು ಜಾರಿಗೆ ತರುವುದಿಲ್ಲ ನಿಮ್ಮ ಪಾಡಿಗೆ ನೀವು ತುಂಬಿದ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಿ ಎಂದು ಇದೀಗ ಯುವರತ್ನ ಚಿತ್ರ ಬಿಡುಗಡೆಯಾದ ಎರಡೇ ದಿನಕ್ಕೆ ತನ್ನ ಮಾತನ್ನ ಬದಲಿಸಿರುವ ಸರ್ಕಾರದ ಬಗ್ಗೆ ಈ ರೀತಿ ಮಾತನಾಡಿದರೆ ತಪ್ಪಿಲ್ಲ ಅನ್ನಿಸದೆ ಇರಲಾರದು.

LEAVE A REPLY

Please enter your comment!
Please enter your name here