ನಾಳೆ ರಾಜ್ಯಾದ್ಯಂತ ಯುವರತ್ನ ಭರ್ಜರಿಯಾಗಿ ಬಿಡುಗಡೆಯಾಗುತ್ತಿದ್ದು ಇಂದಿನಿಂದಲೇ ಎಲ್ಲಾ ಕಡೆ ಭರ್ಜರಿ ಸೆಲೆಬ್ರೇಷನ್ ಶುರುವಾಗಿದೆ.
ಕರ್ನಾಟಕದ ಗಡಿ ತಾಲ್ಲೂಕಾದ ಕೊಳ್ಳೇಗಾಲದಲ್ಲಿ ಸಹ ಯುವರತ್ನ ಚಿತ್ರದ ಹವಾ ಜೋರಾಗಿದೆ. ಇಂದು ಮಧ್ಯಾಹ್ನದಿಂದಲೇ ಟಿಕೆಟ್ ವಿತರಣೆ ನಡೆದಿದ್ದು ಮೊದಲ ದಿನದ 2 ಪ್ರದರ್ಶನಗಳ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.
ಇಂದು ಮಧ್ಯಾಹ್ನದಿಂದಲೇ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಸಾಲುಗಟ್ಟಿ ನಿಂತು ಯುವರತ್ನ ಚಿತ್ರದ ಸಂಭ್ರಮಾಚರಣೆ ಮಾಡಿದರು. ಚಿತ್ರಮಂದಿರದ ಮುಂದೆ ಅಭಿಮಾನಿಗಳು ನೆರೆದಿದ್ದ ಕಾರಣ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.