ಧ್ರುವ ಸರ್ಜಾ ಅಭಿನಯದ ಪೊಗರು ಫೆಬ್ರವರಿ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ ಪೊಗರು ಚಿತ್ರ ಬಿಡುಗಡೆಯಾದ ನಂತರ ಆ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಯಿತು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಪೊಗರು ಚಿತ್ರ ಮೂವತ್ತು ದಿನಗಳನ್ನು ತೆವಲುತ್ತಾ ದಾಟಿದ್ದು ಮಹಾ ಸಾಧನೆಯೇ ಸರಿ.
ಈ ಬಾರಿ ನೂರು ದಿನ ಕಷ್ಟ ಐವತ್ತು ದಿನಗಳ ಸಂಭ್ರಮಾಚರಣೆಯನ್ನು ಆದರೂ ಸಹ ಪೊಗರು ಚಿತ್ರ ಮಾಡುತ್ತದೆ ಎಂದು ಕಾದು ಕುಳಿತಿದ್ದ ಧ್ರುವ ಅಭಿಮಾನಿಗಳಿಗೆ ಪುನೀತ್ ಅಭಿನಯದ ಯುವರತ್ನ ಚಿತ್ರ ಶಾಕ್ ನೀಡಿದೆ. ಹೌದು ಪೊಗರು ಚಿತ್ರದ ಮುಖ್ಯ ಚಿತ್ರಮಂದಿರಗಳಾದ ನರ್ತಕಿಯಲ್ಲಿ ಏಪ್ರಿಲ್ ಒಂದನೇ ತಾರೀಕಿನಿಂದ ಯುವರತ್ನ ಬಿಡುಗಡೆಯಾಗಲಿದೆ. ಹೀಗಾಗಿ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರವನ್ನ ಮುಖ್ಯ ಚಿತ್ರಮಂದಿರದಿಂದಲೇ ಐವತ್ತು ದಿನಕ್ಕೂ ಮುನ್ನ ಕಿತ್ತೊಗೆಯಲಿದ್ದಾರೆ.
ಕೇವಲ ನರ್ತಕಿ ಮಾತ್ರವಲ್ಲದೆ ವೀರೇಶ್ ಚಿತ್ರಮಂದಿರದಿಂದಲೂ ಸಹ ಪೊಗರು ಗೆ ಗೇಟ್ ಪಾಸ್ ನೀಡಲಾಗುತ್ತಿದೆ. ಧ್ರುವ ಸರ್ಜಾ ಅಭಿನಯದ ಕಳೆದ 3ಚಿತ್ರಗಳು ಶತ ದಿನೋತ್ಸವವನ್ನು ಆಚರಿಸಿಕೊಂಡಿದ್ದವು. ಆದರೆ ಇದೇ ಮೊದಲ ಬಾರಿಗೆ 40 ದಿನಗಳಿಗೆ ಅವರ ಚಿತ್ರವೊಂದು ಅಂತ್ಯ ಕಾಣುತ್ತಿದೆ!