ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..! 

Date:

ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..!

ರಾಜಧಾನಿ ಬೆಂಗಳೂರಿನ ಎಸ್ಜಿಬಿಎಸ್ ಉನ್ನತಿ ಫೌಂಡೇಶನ್ ಆರ್ಥಿಕವಾಗಿ ದುರ್ಬಲವಾಗಿರೋ ಯುವ ಪ್ರತಿಭೆಗಳ ಬದುಕಿಗೆ ಆಶಾಕಿರಣ. ಹಿಂದುಳಿದ ಯುವ ಪ್ರತಿಭೆಗಳನ್ನ ಗುರುತಿಸಿ ಅವರಿಗೆ ಸೂಕ್ತ ತರಬೇತಿಗಳನ್ನ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಉನ್ನತಿ ಫೌಂಡೇಶನ್ ಶ್ರಮಿಸುತ್ತಿದೆ.
ಸಾಮಾಜಿಕ ಕಳಕಳಿಯೊಂದಿಗೆ 1978ರಲ್ಲೇ ಎಸ್ಜಿಬಿಎಸ್ ಸ್ಥಾಪನೆಯಾಗಿತ್ತು. 1993ರಲ್ಲಿ ಉನ್ನತಿ ಎಸ್ ಜಿಬಿಎಸ್ ಫೌಂಡೇಶನ್ ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂತು. ಕೇವಲ ಶೇಕಡಾ 5ರಷ್ಟು ಮಾತ್ರ ರಿಜಿಸ್ಟ್ರೇಷನ್ ಶುಲ್ಕವನ್ನ ಪಡೆಯೋ ಈ ಸಂಸ್ಥೆ ಉಳಿದ ಎಲ್ಲಾ ತರಬೇತಿಗಳನ್ನ ಉಚಿತವಾಗಿ ನೀಡುತ್ತೆ. ಭಾರತದಲ್ಲಿ ಈಗಾಗಲೇ 13 ಕೇಂದ್ರಗಳನ್ನ ಹೊಂದಿರುವ ಉನ್ನತಿಯ 5 ಬ್ರಾಂಚ್ಗಳನ್ನ ಬೇರೆ ಬೇರೆ ಎನ್ಜಿಓಗಳು ನಿರ್ವಹಿಸುತ್ತಿವೆ.
ಮತ್ತೆ, ಈಗಾಗಲೇ ಇನ್ನಷ್ಟು ಕೇಂದ್ರಗಳನ್ನ ತೆರೆಯುವಂತೆ ಉನ್ನತಿ ಫೌಂಡೇಷನ್ ಮುಂದೆ ಪ್ರಪೋಸಲ್ ಕೂಡ ಇದೆ. ಪ್ರತೀ ವರ್ಷ 300ರಷ್ಟು ಅಭ್ಯರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದು, ವರ್ಷಕ್ಕೆ 18 ಲಕ್ಷ ರೂಪಾಯಿ ತರಬೇತಿಗಾಗಿ ವೆಚ್ಚ ಮಾಡಲಾಗ್ತಿದೆ. ವಿವಿಧ ಸಂಘ ಸಂಸ್ಥೆಗಳು, ಎನ್ಜಿಓಗಳು ಆ ವೆಚ್ಚ ಭರಿಸುತ್ತಿದ್ದು ಸರ್ಕಾರದಿಂದ ತೆರಿಗೆ ವಿನಾಯಿತಿಯೂ ಸಿಕ್ಕಿದೆ. ಹೀಗೆ ಹಿಂದುಳಿದ ಯುವಕರಲ್ಲಿ ಸ್ಫೂರ್ತಿ ತುಂಬಿ ಅವರ ಬದುಕಿಗೆ ಉತ್ಸಾಹ ತುಂಬು ದಾರಿದೀಪವಾಗುತ್ತಿದೆ ಉನ್ನತಿ ಎಸ್ಜಿಬಿಎಸ್ ಫೌಂಡೇಶನ್.
ಎಸ್ಜಿಬಿಎಸ್ ಹಲವು ಗುರಿಗಳನ್ನ ಇಟ್ಟುಕೊಂಡು ತರಬೇತಿ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದೆ. ತನ್ನ ಸಂಸ್ಥೆಯಲ್ಲೇ ವಿವಿಧ ಗ್ರೂಪ್ಗಳನ್ನ ಮಾಡಿಕೊಂಡು ತರಬೇತಿಯಲ್ಲಿ ವೈವಿಧ್ಯತೆಯನ್ನ ಹೊಂದಿದೆ. ಉನ್ನತಿ ಎಂಬ ಕಾರ್ಯಕ್ರಮದಡಿ ನಿರುದ್ಯೋಗಿ ಹಾಗೂ ಹಿಂದುಳಿದ ವರ್ಗದವರಿಗೆ ವರ್ಷದ ಆಯ್ದ ದಿನಗಳಲ್ಲಿ ತರಬೇತಿ ನೀಡಲಾಗುತ್ತೆ. ಶಿಕ್ಷಾ ಎನ್ನುವ ಹೆಸರಿನಲ್ಲಿ ಪ್ರೈಮರಿ ಎಜ್ಯುಕೇಷನ್, ಉತ್ಸವ್ ಹೆಸರಿನಲ್ಲಿ ಸಂಪ್ರದಾಯ, ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ತರಬೇತಿ, ಸಮಸ್ತ ಅನ್ನೋ ಕಾರ್ಯಕ್ರಮದಡಿ ವಿವಿಧ ಸರ್ವೀಸ್ಗಳ ಬಗ್ಗೆ ತರಬೇತಿ ನೀಡುತ್ತಿದೆ.
ಈಗಾಗಲೇ 6 ಸಾವಿರ ಯುವಕರಿಗೆ ತರಬೇತಿ ನೀಡುವುದರ ಜೊತೆಗೆ ಅವರೆಲ್ಲರಿಗೂ ಉದ್ಯೋಗಗಳನ್ನೂ ಕೊಡಿಸಿರುವುದು ಉನ್ನತಿಯ ಹೆಗ್ಗಳಿಕೆ. ಉನ್ನತಿ ಎಸ್ಜಿಬಿಎಸ್ ಫೌಂಡೇಶನ್ನಲ್ಲಿ ತರಬೇತಿಯ ಅವಧಿ 50 ದಿನಗಳು. ನಗರ ಹಾಗೂ ಗ್ರಾಮೀಣ ಪ್ರದೇಶದ ಹಿಂದುಳಿದ ಹಾಗೂ 18 ವರ್ಷ ತುಂಬಿದ ಯುವಕರು ಇಲ್ಲಿ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಇಲ್ಲಿ ಮೊದಲು ಲೈಫ್ ಸ್ಕಿಲ್ಸ್, ಕಂಪ್ಯೂಟರ್ ಸ್ಕಿಲ್ಸ್ ಹಾಗೂ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಗಳನ್ನ ತೆಗೆದುಕೊಳ್ಳಲಾಗುತ್ತೆ.

ಇಲ್ಲಿ ತರಬೇತಿ ಕಾರ್ಯಕ್ರಮ ಮುಗಿದ ಬಳಿಕ ಅಭ್ಯರ್ಥಿಗಳಿಗೆ ಬೇರೆ ಬೇರೆ ಹಂತಗಳಲ್ಲಿ ಟ್ರೈನಿಂಗ್ ನೀಡಲಾಗುತ್ತೆ. ಅದ್ರಲ್ಲಿ ವೈಯುಕ್ತಿಕ ಹಂತ ಮೊದಲನೆಯದು. ಇಲ್ಲಿ ಅಭ್ಯರ್ಥಿಗಳ ವರ್ತನೆಗಳ ರೂಪಾಂತರ ಮಾಡಿ ಆತ್ಮವಿಶ್ವಾಸವನ್ನ ತುಂಬಲಾಗುತ್ತೆ. ಉತ್ತಮ ಭವಿಷ್ಯದ ಕನಸು – ಗುರಿ, ಧನಾತ್ಮಕ ಚಿಂತನೆಗಳು, ಹೊರಜಗತ್ತಿನಲ್ಲಿರುವ ಅವಕಾಶಗಳ ಬಗ್ಗೆ ಅರಿವು ಮೂಡಿಸಲಾಗುತ್ತೆ. ಜೊತೆಗೆ ಆರ್ಥಿಕ ಸಂವೇದನೆ ಹಾಗೂ ಪ್ಲಾನಿಂಗ್, ಸಬಲೀಕರಣ ಹಾಗೂ ನಾಯಕತ್ವ ಗುಣಗಳ ಬಗ್ಗೆಯೂ ತಿಳಿಸಲಾಗುತ್ತದೆ. ಇದು ಮುಂದೆ ಯುವಕರ ಬದುಕಿಗೆ ಉನ್ನತಿಯಾಗುತ್ತದೆ.
ಒಟ್ಟಿನಲ್ಲಿ ಓದೋದಿಕ್ಕೆ ಮನಸ್ಸಿದ್ರೂ, ವಿವಿಧ ಕೆಲಸಗಳನ್ನ ಮಾಡುವ ಕೌಶಲ್ಯಗಳಿದ್ರೂ ಅವರಿಗೆ ಮಾರ್ಗದರ್ಶನವೂ ಇಲ್ಲ, ಅವಕಾಶಗಳೂ ಇರೋದಿಲ್ಲ. ಅಂತಹ ಯುವಕರನ್ನ ಗುರುತಿಸಿ ಅವರಿಗೆ ಸೂಕ್ತ ತರಬೇತಿಗಳನ್ನ ನೀಡುವ ಸಂಸ್ಥೆಗಳ ಬಹಳ ವಿರಳ. ಆದರೆ, ಹಿಂದುಳಿದವರ ‘ಉನ್ನತಿ’ಗಾಗಿ ಪರಿಶ್ರಮ ಪಡುತ್ತಿರುವ ಉನ್ನತಿ ಸಂಸ್ಥೆ ಸರ್ವಜನರಿಗೂ ಸ್ಫೂರ್ತಿದಾಯಕ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...