ಇದು ಸ್ಮಶಾನದ ಹೋಟೆಲ್ …! ನಮ್ಮ ದೇಶದಲ್ಲೇ ಇದಿರೋದು ..!

0
530

ಇದು ಸ್ಮಶಾನದ ಹೋಟೆಲ್ …! ನಮ್ಮ ದೇಶದಲ್ಲೇ ಇದಿರೋದು ..!

 

ಹೋಟೆಲ್ ಗಳು ಎಂದರೆ ಎರಡು ವಿಧದಲ್ಲಿರುತ್ತವೆ. ಒಂದು ದಿಲ್ಲಿ ಹೋಟೆಲ್ಲು, ಇನ್ನೊಂದು ಹಳ್ಳಿ ಹೋಟೆಲ್ಲು.. ಪಟ್ಟಣದ ಹೊಟೇಲ್ ಎಂದರೆ ನಯ ನಾಜೂಕಿನ ಹೆಣ್ಣಿದ್ದಂತೆ. ಅವಳನ್ನು ಮುಟ್ಟಬಾರದು, ದೂರದಿಂದಲೇ ನೋಡಿ ನಲಿಯಬೇಕು. ಹಳ್ಳಿಯ ಚಪ್ಪರದ ಚಹಾ ಅಂಗಡಿ ಎಂದರೆ ಇಳಕಲ್ ಸೀರೆ ಉಟ್ಟು, ಗುಳೇದಗುಡ್ಡದ ಕುಪ್ಪಸ ತೊಟ್ಟ ಮೈ ಕೈ ತುಂಬಿದ ಜವಾರಿ ಹೆಣ್ಣಿದ್ದಂತೆ. ನೋಡಲು ಅಂದವಾಗಿರದಿದ್ದರೆ ಏನಂತೆ ಸುಂದರ ಅನುಭೂತಿ ನೀಡಬಲ್ಲದು. ಆದರೆ ಇಲ್ಲೊಂದು ಹೋಟೆಲ್ ಇದೆ. ಅದು ಇವೆರಡೂ ಮಾದರಿಗಳಿಗಿಂತಲೂ ವಿಭಿನ್ನವಾದುದು. ಅದರ ಹೆಸರು `ನ್ಯೂ ಲಕ್ಕಿ ಹೋಟೆಲ್’ ಅಂತ. ಸ್ಥಳಿಯರು ಇದನ್ನು ಸ್ಮಶಾನದ ಹೋಟೆಲ್ ಎಂದು ಕರೆಯುತ್ತಾರೆ. ಅರೇ ಸ್ಮಶಾನದ ಹೋಟೆಲ್ಲಾ ಎಂದು ಬೆಚ್ಚಿ ಬೀಳಬೇಡಿ.. ಮುಂದೆ ಸ್ಟೋರಿ ಓದಿ ನಿಮಗೇ ಗೊತ್ತಾಗುತ್ತೆ.

ಅಹ್ಮದಾಬಾದ್ನಲ್ಲಿರುವ ಈ ಹೋಟೆಲ್ ಸ್ಮಶಾನದಲ್ಲಿ ಕಟ್ಟಲ್ಪಟ್ಟಿದೆ. ಅಲ್ಲದೇ ಅಲ್ಲಿ ಇಂದಿಗೂ ಸಮಾಧಿಗಳಿವೆ. ಹೌದು ರೀ ಇಂಥದ್ದೊಂದು ಐಡಿಯಾ ಯಾರದ್ದೋ ಏನೋ..? ನಿಜವಾದ ಸ್ಮಶಾನದ ಜಾಗದಲ್ಲೇ ಹೋಟೆಲ್ ನಿರ್ಮಿಸಿದ್ದಾರೆ. ಅಲ್ಲದೇ ಇಲ್ಲಿ ತಿಂಡಿ ತಿನ್ನಲು ನೂರಾರು ಜನರು ಬರುತ್ತಾರೆ. ಅಲ್ಲದೇ ಘೋರಿಗಳ ಪಕ್ಕದಲ್ಲೇ ಕುಳಿತು ತಿಂಡಿ ತಿನ್ನಬೇಕು, ಟೀ ಕುಡಿಯಬೇಕು. ಅಲ್ಲದೇ ಒಂದೊಂದು ಟೇಬಲ್ ಗೆ ಹೋಗಬೇಕೆಂದರೆ ಸಮಾಧಿಗಳ ಮೇಲೆ ಕಾಲಿಟ್ಟು ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಎಷ್ಟೇ ಕಷ್ಟವಾದರೂ ಗ್ರಾಹಕರು ಮಾತ್ರ ಸಮಾಧಿಗಳ ಮೇಲೆ ಕಾಲಿಟ್ಟು ಹೋಗುವುದಿಲ್ಲ. ಇನ್ನೊಂದೆಡೆ ಇಲ್ಲಿನ ಮಾಣಿ(ಸರ್ವರ್)ಗಳು ಸಮಾಧಿಗಳ ಮೇಲೆ ಕಾಲಿಡದೇ ಪಟ ಪಟನೇ ನಡೆದುಬಿಡುತ್ತಾರೆ. ಇದು ಹೋಟೆಲ್ ಗೆ ಬರುವ ಗ್ರಾಹಕರಿಗೆ ದಂಗುಬಡಿಯುವಂತೆ ಮಾಡುತ್ತದೆ.

ಇಲ್ಲಿನ ಸಮಾಧಿಯೊಳಗೆ ಮಲಗಿದವರು ಯಾರಾದರೂ ಗ್ರಾಹಕರಿಗೆ ತೊಂದರೆ ಕೊಟ್ಟಿಲ್ಲವೇ ಎಂಬ ಪ್ರಶ್ನೆಗೆ ಉತ್ತರವೂ ಇದೆ. ಇಲ್ಲಿಯವರೆಗೆ ಯಾವ ಶವವೂ ಎದ್ದು ಯಾರಿಗೂ ತೊಂದರೆ ಕೊಟ್ಟ ಉದಾಹರಣೆ ಇಲ್ಲ. ಅಲ್ಲದೇ ಇಲ್ಲಿಗೆ ಬರುವ ಯಾವುದೇ ಗ್ರಾಹಕರನೂ ಹೆದರಿ ಓಡಿಲ್ಲ. ಆದ್ದರಿಂದಲೇ ಈ ಹೋಟೆಲ್ ಲಾಭದಲ್ಲಿಯೂ ನಡೆಯುತ್ತಿದೆ. ಕೀರ್ತಿಯನ್ನೂ ಪಡೆಯುತ್ತಿದೆ. ಇಷ್ಟಕ್ಕೂ ನಿಮಗೆ ಟೈಮ್ ಸಿಕ್ಕಾಗ `ಸ್ಮಶಾನದ ಹೋಟೆಲ್’ಗೆ ಒಮ್ಮೆ ಭೇಟಿ ಕೊಟ್ಟು ಬನ್ನಿ.

 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್  ಸುದೀಪ್ ಅಲ್ಲ ..! ಮತ್ಯಾರು?

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

ಸಾಮಾನ್ಯ ಕುಟುಂಬದ ವ್ಯಕ್ತಿ 4ಸಾವಿರ ಕೋಟಿ ಮೌಲ್ಯದ ಕಂಪನಿ ಒಡೆಯ ಆಗಿದ್ದೇಗೆ?

17ನೇ ವಯಸ್ಸಿಗೆ ಕಾಲೇಜು ಡ್ರಾಪ್ಔಟ್; 22ರಲ್ಲಿ ಕೋಟಿ ಕೋಟಿ ಒಡೆಯ!

 

 

LEAVE A REPLY

Please enter your comment!
Please enter your name here