ಎಪಿ ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ. ಎಪಿ ಅರ್ಜುನ್ ಅವರ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಈ ಚಿತ್ರದ ಮೇಲೆ ಪ್ರೇಕ್ಷಕರಿಗೆ ತುಂಬಾ ಭರವಸೆ ಇತ್ತು. ಇನ್ನು ಕಿಸ್ ಚಿತ್ರ ಬಿಡುಗಡೆಯಾದ ಎರಡೇ ದಿನಕ್ಕೆ ಯೂಟ್ಯೂಬ್ನಲ್ಲಿ ಈ ಚಿತ್ರ ಲಭ್ಯವಾಗಿರುವ ಕುರಿತು ಹಲವಾರು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಕಿಸ್ ಚಿತ್ರವನ್ನು ಯಾರಾದರೂ ಪೈರಸಿ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು.
ಯಾಕೆಂದರೆ ಕಿಸ್ ಚಿತ್ರ 100 Days With Mr Arrogant ಎಂಬ ಕೊರಿಯನ್ ಚಿತ್ರದ ಕಾಫಿ ಎನ್ನಲಾಗುತ್ತಿದೆ. ಈ ಕೊರಿಯನ್ ಚಿತ್ರ ಯೂಟ್ಯೂಬ್ನಲ್ಲಿ ಲಭ್ಯವಿದ್ದು ಇದನ್ನು ವೀಕ್ಷಿಸಿದ ಪ್ರೇಕ್ಷಕರು ಕಿಸ್ ಮತ್ತು ಈ ಚಿತ್ರದ್ದು ಎರಡು ಸಹ ಒಂದೇ ಕಥೆ ಕನ್ನಡ ನೇಟಿವಿಟಿಗೆ ತಕ್ಕಂತೆ ಮಾತ್ರ ಕಿಸ್ ಚಿತ್ರದಲ್ಲಿ ಬದಲಾವಣೆ ಆಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೊರಿಯನ್ ಚಿತ್ರದ ಕಥೆ ಮತ್ತು ಕಿಸ್ ಚಿತ್ರದ ಕಥೆ ಎರಡೂ ಒಂದೇ ಆಗಿರುವುದರಿಂದ ಪ್ರೇಕ್ಷಕರು ಈ ರೀತಿಯಾಗಿ ಆರೋಪವನ್ನು ಮಾಡುತ್ತಿದ್ದು ಕಿಸ್ ಚಿತ್ರ ಈ ಕೊರಿಯನ್ ಚಿತ್ರದ ರಿಮೇಕ್ ಎನ್ನಲಾಗುತ್ತಿದೆ.