ಯೋ ಯೋ ಟೆಸ್ಟ್ ನಲ್ಲಿ ಗಂಗೂಲಿ, ಲಕ್ಷ್ಮಣ್ ಫೇಲ್ ಆಗ್ತಿದ್ರು ಅಂದ ಸೆಹ್ವಾಗ್!

Date:

: ಟೀಮ್ ಇಂಡಿಯಾ ಪರ ಆಡಲು ಫಿಟ್ನೆಸ್‌ ಟೆಸ್ಟ್‌ ಪಾಸ್‌ ಆಗಲೇ ಬೇಕು ಎಂಬುದನ್ನು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ.

ಟೀಮ್ ಇಂಡಿಯಾ ಆಟಗಾರರ ಫಿಟ್ನೆಸ್‌ ವಿಚಾರದಲ್ಲಿ ಯೋ-ಯೋ ಟೆಸ್ಟ್‌ ಹಲವು ವರ್ಷಗಳಿಂದ ಚರ್ಚೆಯ ವಿಷಯವಾಗಿದೆ. ಭಾರತ ತಂಡಕ್ಕೆ ಎರಡು ವಿಶ್ವಕಪ್‌ ಟ್ರೋಫಿಗಳನ್ನು ಗೆದ್ದುಕೊಟ್ಟ ಸ್ಟಾರ್‌ ಆಲ್‌ರೌಂಡರ್‌ ಯುವರಾಜ್ ಸಿಂಗ್ ಕೂಡ ಯೋ-ಯೋ ಟೆಸ್ಟ್‌ನಲ್ಲಿ ಫೇಲ್ ಆಗಿದ್ದರು.

ಇನ್ನು ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ಸಲುವಾಗಿ ನಡೆಸಿದ ಯೋ-ಯೋ ಟೆಸ್ಟ್‌ನಲ್ಲಿ ಯುವ ಪ್ರತಿಭೆಗಳಾದ ವರುಣ್ ಚಕ್ರವರ್ತಿ ಮತ್ತು ರಾಹುಲ್ ತೆವಾಟಿಯಾ ಫಿಟ್ನೆಸ್‌ ಟೆಸ್ಟ್‌ ಪಾಸ್‌ ಮಾಡುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಕ್ರಿಕ್‌ಬಝ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಹ್ವಾಗ್‌, ಫೀಲ್ಡಿಂಗ್‌ ಮಾಡುವ ಮತ್ತು 10 ಓವರ್‌ ಬೌಲಿಂಗ್‌ ಮಾಡುವ ಸಾಮರ್ಥ್ಯ ಇದ್ದರೆ ಸಾಕು ಭಾರತ ತಂಡಕ್ಕೆ ಆಯ್ಕೆ ಮಾಡಬಹುದು ಎಂದಿದ್ದಾರೆ.

ಇನ್ನು ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ಸಲುವಾಗಿ ನಡೆಸಿದ ಯೋ-ಯೋ ಟೆಸ್ಟ್‌ನಲ್ಲಿ ಯುವ ಪ್ರತಿಭೆಗಳಾದ ವರುಣ್ ಚಕ್ರವರ್ತಿ ಮತ್ತು ರಾಹುಲ್ ತೆವಾಟಿಯಾ ಫಿಟ್ನೆಸ್‌ ಟೆಸ್ಟ್‌ ಪಾಸ್‌ ಮಾಡುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಕ್ರಿಕ್‌ಬಝ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಹ್ವಾಗ್‌, ಫೀಲ್ಡಿಂಗ್‌ ಮಾಡುವ ಮತ್ತು 10 ಓವರ್‌ ಬೌಲಿಂಗ್‌ ಮಾಡುವ ಸಾಮರ್ಥ್ಯ ಇದ್ದರೆ ಸಾಕು ಭಾರತ ತಂಡಕ್ಕೆ ಆಯ್ಕೆ ಮಾಡಬಹುದು ಎಂದಿದ್ದಾರೆ.

“ಆಟಗಾರರ ತಂತ್ರಗಾರಿಕೆ ಮುಖ್ಯ. ಈಗ ತಂಡದಲ್ಲಿ ಫಿಟ್ನೆಸ್‌ ಇರುವ ಆಟಗಾರರೇ ಇದ್ದು ಅವರಲ್ಲಿ ತಂತ್ರಗಾರಿಕೆ ಇಲ್ಲ ಎಂದರೆ ಪ್ರಯೋಜನವೇನು. ಇದರಿಂದ ಸೋಲೆದುರಾಗುವುದು ನಿಶ್ಚಿತ. ಅವರಲ್ಲಿನ ತಂತ್ರಗಾರಿಕೆಯ ಅನುಗುಣವಾಗಿ ಆಡಿಸಿ. ನಂತರ ನಿಧಾನವಾಗಿ ಅವರು ತಮ್ಮ ಫಿಟ್ನೆಸ್‌ ಸುಧಾರಿಸಿಕೊಳ್ಳಬಲ್ಲರು. ಆದರೆ, ಆಟಗಾರರ ಮೇಲೆ ಮೊದಲು ಯೋ-ಯೋ ಟೆಸ್ಟ್‌ ಹೇರಲಾಗುತ್ತಿದೆ. ಆಟಗಾರ 10 ಓವರ್‌ ಬೌಲಿಂಗ್ ಮಾಡುತ್ತಾನೆಂದರೆ ಅಷ್ಟೇ ಸಾಕು. ಉಳಿದ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ,” ಎಂದು ಸೆಹ್ವಾಗ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

“ಇಲ್ಲಿ ಒಂದು ಮಾತು ಸ್ಪಷ್ಟಪಡಿಸುತ್ತೇನೆ. ಇಲ್ಲಿ ಯೋ-ಯೋ ಟೆಸ್ಟ್‌ ಬಗ್ಗೆ ಮಾತನಾಡುತ್ತಿದ್ದೇವೆ. ಹಾರ್ದಿಕ್ ಪಾಂಡ್ಯಗೆ ಓಡಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಆರ್‌ ಅಶ್ವಿನ್ ಮತ್ತು ವರುಣ್ ಚಕ್ರವರ್ತಿ ಈ ರೀತಿಯ ಓಟದ ಪರೀಕ್ಷೆಯಲ್ಲಿ ವಿಫಲರಾಗುವುದು ಸಹಜ. ಹೀಗಾಗಿ ಈ ಮಾನದಂಡವನ್ನು ನಾನು ವಿರೋಧಿಸುತ್ತೇನೆ. ಹಿಂದೇನಾದರೂ ಈ ರೋತ ಯೋ-ಯೋ ಟೆಸ್ಟ್‌ ಇದಿದ್ದರೆ, ಸೌರವ್ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್ ಕೂಡ ಪಾಸ್‌ ಆಗುತ್ತಿರಲಿಲ್ಲ,” ಎಂದು ಸೆಹ್ವಾಗ್‌ ಉತ್ತರ ಕೊಟ್ಟಿದ್ದಾರೆ.

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...