ಕೊರೊನಾ ಟೈಮ್‌ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಟ್ಸಾಫ್ ಎಂದು ಚಂದನವನದ ನಟಿ ರಚಿತಾ ರಾಮ್ ಹೇಳಿದರು. ವೈಯಕ್ತಿಕ ಕಾರ್ಯಕ್ರಮ ಹಿನ್ನೆಲೆ ರಚಿತಾ ರಾಮ್ ಅವರು ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದರು.
ಆಗ ಮಂಗಳೂರು ನಗರ ಪೊಲೀಸರ ಜೊತೆ ಒಂದಷ್ಟು ಹೊತ್ತು ಮಾತುಕತೆ ನಡೆಸಿದರು
ಈ ವೇಳೆ ಅವರು, ಈ ಒಂದು ಸಮಾರಂಭಕ್ಕೆ ನಾನು ಆಕಸ್ಮಿಕವಾಗಿ ಬಂದಿದ್ದೇನೆ. ಇಲ್ಲಿಗೆ ಬಂದಿದ್ದು, ತುಂಬಾ ಖುಷಿಯಾಯಿತು. ನಿನ್ನೆಯೇ ನಾವು ಹೊರಡಬೇಕಿತ್ತು. ಆದರೆ ಅಮ್ಮ ಬೇಡ ಎಂದಿದ್ದಕ್ಕೆ ಇವತ್ತು ಹೋಗಲು ನಿರ್ಧರಿಸಿದೆ. ಬೆಳಗ್ಗೆ 10 ಗಂಟೆಗೆ ಹೊರಡಬೇಕು ಎಂದುಕೊಂಡೆ. ಆದರೆ ತಿಂಡಿ ಬರುವುದು ತಡ ಆಯ್ತು. ಅದಕ್ಕೆ ಆ ಪ್ಲಾನ್ ಕೂಡ ಕ್ಯಾನ್ಸಲ್ ಆಯ್ತು. ನಿನ್ನೆಯೇ ನಾನು ಪಬ್ಬಾಸ್‌ಗೆ ಹೋಗಿ ಐಸ್‍ಕ್ರೀಂ ತಿಂದ್ಕೊಂಡು ಬಂದೆ.
ಏಕೆಂದರೆ ಅದರಿಂದ ನನಗೆ ಗಂಟಲು ಸರಿಯಾಗುತ್ತೆ ಎಂದು ನಕ್ಕರು. ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ನನಗೆ ಇಲ್ಲಿಗೆ ಬರುವಂತೆ ಕೇಳಿಕೊಂಡರು. ಆಗ ನಾನು ಬಂದೆ. ಮನೆಗೆ ಹೇಗೆ ಹೊರಟಿದ್ದೇನೋ ಹಾಗೇ ಇಲ್ಲಿಗೆ ಬಂದೆ. ಅದು ಅಲ್ಲದೇ ಈ ರೀತಿ ಸ್ವಾಗತ ಸಿಗುತ್ತೆ ಎಂದು ತಿಳಿದುಕೊಂಡಿರಲಿಲ್ಲ. ಇದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದರು.