ಇತ್ತೀಚಿಗೆ ಸಿಎಂ ಕುಮಾರಸ್ವಾಮಿ ರೆಸಾರ್ಟ್ ಗೆ ಹೋದ ವಿಷಯ ಬಾರಿ ಚರ್ಚೆಯಾಗುತ್ತಿತ್ತು, ಚುನಾವಣೆ ಮುಗಿದ ಬಳಿಕ ಮೊದಲು ಉಡುಪಿಯಲ್ಲಿರುವ ಪ್ರಕೃತಿ ಚಿಕಿತ್ಸಾಲಯದಲ್ಲಿ ವಿಶ್ರಾಂತಿಯನ್ನು ಪಡೆದಿದ್ದ ಸಿಎಂ ಕುಮಾರಸ್ವಾಮಿ ತದನಂತರ ತಮಿಳುನಾಡಿಗೆ ತೆರಳಿ ದೇವರ ದರ್ಶನವನ್ನು ಪಡೆದಿದ್ದರು.
ಇದಾದ ಬಳಿಕ ತಮಿಳುನಾಡಿನಿಂದ ನೇರವಾಗಿ ಮಡಿಕೇರಿಯ ಇಬ್ಬನಿ ರೆಸಾರ್ಟ್ ನಲ್ಲಿ ಎರಡು ದಿನಗಳ ಕಾಲ ತಂಗಿದ್ದ ಕುಮಾರಸ್ವಾಮಿ ರಾಜ್ಯದ ಜನರ ಕಷ್ಟಗಳನ್ನು ಆಲಿಸುತ್ತಿಲ್ಲ ಮತ್ತು ರಾಜ್ಯದಲ್ಲಿ ವ್ಯಾಪಿಸಿರುವ ಭೀಕರ ಬರಗಾಲಕ್ಕೆ ಯಾವುದೇ ಪರಿಹಾರವನ್ನು ದೊರಕಿಸಿ ಕೊಡುತ್ತಿಲ್ಲ, ಚುನಾವಣೆಯ ಬಳಿಕ ಕುಮಾರಸ್ವಾಮಿ ಈ ರೀತಿ ರೆಸಾರ್ಟ್ ನಲ್ಲಿ ತಂಗುವುದು ಮತ್ತು ದೇವರ ದರ್ಶನವನ್ನು ಪಡೆಯಲು ಸುತ್ತುತ್ತಿರುವುದು ಕಂಡು ವಿರೋಧ ಪಕ್ಷಗಳು ಅವರನ್ನು ಕಟುವಾಗಿ ಟೀಕಿಸಿದ್ದವು.
ಇದೀಗ ಸಿಎಂ ಕುಮಾರಸ್ವಾಮಿ ವಿರೋಧ ಪಕ್ಷಗಳ ಎಲ್ಲಾ ಟೀಕೆಗಳಿಗೆ ಮೈಸೂರಿನಲ್ಲಿ ಉತ್ತರವನ್ನು ನೀಡಿದ್ದಾರೆ, ಹೌದು ನಾನು ರೆಸಾರ್ಟ್ ನಲ್ಲಿ ತಂಗಿದ್ದು ನಿಜ ನನಗೆ ರಜೆ ಇತ್ತು ಅದಕ್ಕೆ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ರಜಾ ಇದ್ದಾಗ ರೆಸಾರ್ಟ್ ನಲ್ಲಿ ಉಳಿದುಕೊಳ್ಳುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಇದರೊಂದಿಗೆ ರಜೆ ಸಮಯದಲ್ಲಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಇದರೊಂದಿಗೆ ರಜೆ ಸಮಯದಲ್ಲಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎನ್ನುವ ರೀತಿಯಲ್ಲಿ ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ.